ADVERTISEMENT

ಮುಂದಿನ ವರ್ಷವೇ ಹಾರುವ ಟ್ಯಾಕ್ಸಿ ಆರಂಭಿಸಲಿದೆ ಏರ್ ಏಷ್ಯಾ

ಡೆಕ್ಕನ್ ಹೆರಾಲ್ಡ್
Published 7 ಮಾರ್ಚ್ 2021, 8:15 IST
Last Updated 7 ಮಾರ್ಚ್ 2021, 8:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮಲೇಷ್ಯಾ ಮೂಲದ ಬಜೆಟ್ ಏರ್‌ಲೈನ್ ಸಂಸ್ಥೆ ಏರ್‌ಏಷ್ಯಾ ಸಮೂಹ, 2022ರಲ್ಲಿ ಹಾರುವ ಟ್ಯಾಕ್ಸಿ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ.

ಕಂಪನಿ ಸಿಇಒ ಮತ್ತು ಸಹಸ್ಥಾಪಕ ಟೋನಿ ಫರ್ನಾಂಡಿಸ್ ಈ ವಿಚಾರವನ್ನು ಶನಿವಾರ ಬಹಿರಂಗಪಡಿಸಿದ್ದಾರೆ. ಹೊಸ ಉದ್ಯಮ ಆರಂಭಿಸಲು ನಮಗೆ ಒಂದೂವರೆ ವರ್ಷ ಸಮಯವಿದೆ ಎಂದು ಅವರು ತಿಳಿಸಿದ್ದಾರೆ.

ಯೂತ್ ಎಕನಾಮಿಕ್ ಫೋರಂನಲ್ಲಿ ಆನ್‌ಲೈನ್ ಚರ್ಚೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಅವಧಿಯಲ್ಲಿ ಏರ್‌ಲೈನ್ಸ್ ಉದ್ಯಮಕ್ಕೆ ತೊಂದರೆಯಾಗಿದೆ. ಏರ್‌ಏಷ್ಯಾ ಈ ಅವಧಿಯಲ್ಲಿ ಡಿಜಿಟಲ್ ಸ್ಪೇಸ್ ಅನ್ನು ವಿಸ್ತರಿಸುತ್ತಿದೆ. ಈ ಅವಧಿಯಲ್ಲಿ ಪ್ರಯಾಣ, ಶಾಪಿಂಗ್, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆಗಳಲ್ಲಿ ವಿಶೇಷ ಆಫರ್ ಲಭ್ಯವಿರುವ ಸೂಪರ್ ಆ್ಯಪ್ ಅನ್ನು ಪರಿಚಯಿಸಲಾಗಿದೆ ಎಂದಿದ್ದಾರೆ.

ADVERTISEMENT

ಮುಂದಿನ ವರ್ಷ ನಾಲ್ಕು ಜನರು ಕುಳಿತುಕೊಳ್ಳಬಹುದಾದ ಹಾರುವ ಟ್ಯಾಕ್ಸಿ ಸೇವೆ ಆರಂಭಿಸುವ ಉದ್ದೇಶವಿದೆ. ಕ್ವಾಡ್‌ಕಾಪ್ಟರ್ ಬೆಂಬಲದಿಂದ ಇದು ಕಾರ್ಯನಿರ್ವಹಿಸಲಿದೆ ಎಂದು ಟೋನಿ ತಿಳಿಸಿದ್ದಾರೆ.

ಜತೆಗೆ ಮಲೇಷ್ಯನ್ ಗ್ಲೋಬಲ್ ಇನೋವೇಶನ್ ಮತ್ತು ಕ್ರಿಯೇಟಿವಿಟಿ ಸೆಂಟರ್ ಸಹಯೋಗದಲ್ಲಿ ನಗರಗಳಲ್ಲಿ ಡ್ರೋನ್ ಡೆಲಿವರಿ ಸೇವೆ ಒದಗಿಸುವ ಉದ್ದೇಶವಿದೆ ಎಂದು ಏರ್‌ಏಷ್ಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.