ADVERTISEMENT

ದೇಶಿಯ ವಿಮಾನಯಾನ ಸೇವೆ ಅ.18 ರಿಂದ ನಿರ್ಬಂಧದ ತೆರವು

ಪಿಟಿಐ
Published 12 ಅಕ್ಟೋಬರ್ 2021, 11:53 IST
Last Updated 12 ಅಕ್ಟೋಬರ್ 2021, 11:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಸಾಮರ್ಥ್ಯದ ನಿರ್ಬಂಧ ಇಲ್ಲದೆಯೇ ದೇಶೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್‌ 18ರಿಂದ ಸೇವೆಯನ್ನು ಆರಂಭಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶೀಯ ವಿಮಾನಗಳ ಸಂಚಾರ ಸ್ಥಿತಿಗತಿ ಮತ್ತು ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ ಪ್ರಕಟಿಸಿದೆ.

ಅಕ್ಟೋಬರ್‌ 9ರಂದು ವಿವಿಧ ವಿಮಾನಯಾನ ಸಂಸ್ಥೆಗಳು 2,340 ವಿಮಾನಗಳ ಸಂಚಾರ ನಡೆಸಿದ್ದು, ಇದು ಅವುಗಳ ಒಟ್ಟು ಸಾಮರ್ಥ್ಯದ ಶೇ 71.5ರಷ್ಟಾಗಿತ್ತು.

ADVERTISEMENT

ಪ್ರಸ್ತುತ ವಿಮಾನಯಾನ ಸಂಸ್ಥೆಗಳು ಕೋವಿಡ್‌ ಪೂರ್ವ ಸ್ಥಿತಿಗೆ ಹೋಲಿಸಿದರೆ ಶೇ 85ರಷ್ಟು ವಿಮಾನಗಳ ಸಂಚಾರ ಸೇವೆಯನ್ನು ನೀಡುತ್ತಿವೆ. ಸಾಮರ್ಥ್ಯ ನಿರ್ಬಂಧವು ಆ.12–ಸೆ.18ರ ನಡುವೆ ಶೇ 72.5ರಷ್ಟಿತ್ತು. ಇದು, ಜುಲೈ 5– ಆಗಸ್ಟ್‌ 12ರ ನಡುವೆ ಶೇ 65 ಹಾಗೂ ಜೂನ್‌ 1–ಜುಲೈ 5ರ ನಡುವೆ ಶೇ 50ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.