ADVERTISEMENT

ಹೀಥ್ರೊಗೆ ವಿಮಾನ ಹಾರಾಟ ಪುನರಾರಂಭ

ಪಿಟಿಐ
Published 22 ಮಾರ್ಚ್ 2025, 13:16 IST
Last Updated 22 ಮಾರ್ಚ್ 2025, 13:16 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಿದ್ಯುತ್‌ ಅಡಚಣೆಯಿಂದ ಲಂಡನ್‌ನ ಹೀಥ್ರೊ ವಿಮಾನ ನಿಲ್ದಾಣದಲ್ಲಿ ತಲೆದೋರಿದ್ದ ತಾಂತ್ರಿಕ ಸಮಸ್ಯೆ ಬಗೆಹರಿದಿದೆ. ಹಾಗಾಗಿ ಏರ್‌ ಇಂಡಿಯಾ, ವರ್ಜಿನ್‌ ಅಟ್ಲಾಂಟಿಕ್‌ ಮತ್ತು ಬ್ರಿಟಿಷ್‌ ಏರ್‌ವೇಸ್‌ನಿಂದ ವಿಮಾನ ಕಾರ್ಯಾಚರಣೆ ಶನಿವಾರ ಪುನರಾಂಭಗೊಂಡಿದೆ.

ವಿಮಾನಗಳ ಹಾರಾಟ ರದ್ದಾಗಿದ್ದರಿಂದ ದೆಹಲಿ ಸೇರಿ ವಿವಿಧ ಸ್ಥಳಗಳಿಂದ ಲಂಡನ್‌ಗೆ ಪ್ರಯಾಣಿಸಲು ಸಜ್ಜಾಗಿದ್ದ ಸಾವಿರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಈ ಮೊದಲೇ ನಿಗದಿಯಾಗಿದ್ದಂತೆ ವಿಮಾನಗಳ ಹಾರಾಟ ಬೆಳಿಗ್ಗೆಯೇ ಆರಂಭಗೊಂಡಿದೆ ಎಂದು ವಿಮಾನಯಾನ ಕಂಪನಿಗಳು ತಿಳಿಸಿವೆ.

ಪ್ರತಿದಿನ ಮುಂಬೈ ಮತ್ತು ದೆಹಲಿಯಿಂದ ಬ್ರಿಟಿಷ್‌ ಏರ್‌ವೇಸ್‌ನ ಎಂಟು ವಿಮಾನಗಳು ಹೀಥ್ರೊಗೆ ಹಾರಾಟ ನಡೆಸುತ್ತವೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ವರ್ಜಿನ್‌ ಅಟ್ಲಾಂಟಿಕ್‌ಗೆ ಸೇರಿದ ಐದು ವಿಮಾನಗಳು ಮತ್ತು ಏರ್‌ ಇಂಡಿಯಾದ ಆರು ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.