ಏರ್‌ಟೆಲ್ ಸಿಮ್ 10 ನಿಮಿಷದಲ್ಲಿ ಮನೆಬಾಗಿಲಿಗೆ: ಬ್ಲಿಂಕಿಟ್ ಜತೆ ಒಪ್ಪಂದ
ಚಿತ್ರಕೃಪೆ: letsblinkit
ನವದೆಹಲಿ: ಏರ್‌ಟೆಲ್ ಸಿಮ್ ಕಾರ್ಡ್‌ಗಳನ್ನು 10 ನಿಮಿಷದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಭಾರ್ತಿ ಏರ್‌ಟೆಲ್ ಕಂಪನಿಯು ಕ್ವಿಕ್ ಕಾಮರ್ಸ್ ಕಂಪನಿ ಬ್ಲಿಂಕಿಟ್ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಆರಂಭಿಕ ಹಂತದಲ್ಲಿ ದೇಶದ 16 ಪ್ರಮುಖ ನಗರಗಳಲ್ಲಿ ಈ ಸೇವೆಯನ್ನು ಕಂಪನಿ ಆರಂಭಿಸುತ್ತಿದೆ. ಬೆಂಗಳೂರು, ದೆಹಲಿ, ಗುರುಗ್ರಾಮ, ಫರೀದಾಬಾದ್, ಸೂರತ್, ಚೆನ್ನೈ, ಭೂಪಾಲ್, ಇಂದೋರ್. ಮುಂಬೈ, ಪುಣೆ, ಲಖನೌ, ಜೈಪುರ, ಕೋಲ್ಕತ್ತ ಮತ್ತು ಹೈದರಾಬಾದ್‌ನಲ್ಲಿ ಬ್ಲಿಂಕಿಟ್ ಮೂಲಕ 10 ನಿಮಿಷಗಳಲ್ಲಿ ಏರ್‌ಟೆಲ್ ಸಿಮ್ ಪಡೆಯಬಹುದಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ನಗರಗಳಿಗೂ ಈ ಸೌಲಭ್ಯವನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
10 ನಿಮಿಷದಲ್ಲಿ ಸಿಮ್ ಕಾರ್ಡ್ ಪಡೆಯಲು ಕನಿಷ್ಠ ಸೇವಾ ಶುಲ್ಕವಾಗಿ ₹49 ಪಾವತಿಸಬೇಕು. ಸಿಮ್ ಕಾರ್ಡ್ ದೊರೆತ ಬಳಿಕ ಗ್ರಾಹಕರು ಆಧಾರ್ ಕಾರ್ಡ್ ಆಧಾರಿತ ಕೆವೈಸಿ ಮೂಲಕ ದೃಢೀಕರಣಗೊಳಿಸಿ ಸಿಮ್ ಆಕ್ಟಿವೇಟ್ ಮಾಡಿಕೊಳ್ಳಬಹುದು.
ಗ್ರಾಹಕರು ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಪ್ಲಾನ್ ಆಯ್ಕೆ ಮಾಡಬಹುದು. ಸಿಮ್ ಕಾರ್ಡ್ ದೊರೆತ ಬಳಿಕ 15 ದಿನದ ಒಳಗಾಗಿ ಆಕ್ಟಿವೇಟ್ ಮಾಡಿಕೊಳ್ಳಬೇಕು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.