ADVERTISEMENT

ಹಣದುಬ್ಬರ: ಕಳವಳ ವ್ಯಕ್ತಪಡಿಸಿದ್ದ ಎಂಪಿಸಿ

ಪಿಟಿಐ
Published 22 ಏಪ್ರಿಲ್ 2022, 16:26 IST
Last Updated 22 ಏಪ್ರಿಲ್ 2022, 16:26 IST
ಹಣದುಬ್ಬರ (ಸಾಂದರ್ಭಿಕ ಚಿತ್ರ)
ಹಣದುಬ್ಬರ (ಸಾಂದರ್ಭಿಕ ಚಿತ್ರ)   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಈಚೆಗೆ ನಡೆದ ಸಭೆಯಲ್ಲಿ, ಹಣದುಬ್ಬರ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಸಮಿತಿಯು ಏಪ್ರಿಲ್‌ 6ರಿಂದ 8ರವರೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಸಭೆ ಸೇರಿತ್ತು. ಸಭೆಯು ರೆಪೊ ದರ ಹೆಚ್ಚಿಸದಿರುವ ಒಕ್ಕೊರಲ ತೀರ್ಮಾನ ಕೈಗೊಂಡಿತ್ತು. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಆರ್‌ಬಿಐ ಶುಕ್ರವಾರ ಬಹಿರಂಗಪಡಿಸಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಆರ್‌ಬಿಐ ಡೆಪ್ಯುಟಿ ಗವರ್ನರ್ ದೇವವ್ರತ ಪಾತ್ರಾ ಅವರು, ‘ಜಾಗತೀಕರಣಕ್ಕೆ ವಿಮುಖವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಒಂದು ಸಂಗತಿ ಮಾತ್ರ ಜಗತ್ತಿನ ಎಲ್ಲೆಡೆ ವ್ಯಾ‍ಪಕವಾಗಿ ಕಾಣಿಸುತ್ತಿದೆ. ಅದು ಹಣದುಬ್ಬರ ಹೆಚ್ಚಳಕ್ಕೆ ಸಂಬಂಧಿಸಿದ ಎಚ್ಚರಿಕೆಯ ಗಂಟೆ’ ಎಂದು ಸಭೆಯಲ್ಲಿ ಹೇಳಿದ್ದರು.

ADVERTISEMENT

ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಶೇ 60ರಷ್ಟು ದೇಶಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 5ಕ್ಕಿಂತ ಹೆಚ್ಚಿದೆ. 1980ರ ದಶಕದ ನಂತರದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿರಲಿಲ್ಲ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಶೇ 50ಕ್ಕಿಂತ ಹೆಚ್ಚು ದೇಶಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 7ಕ್ಕಿಂತ ಜಾಸ್ತಿ ಇದೆ. ಬೆಲೆಯ ಏರಿಕೆಯು ಸಮಾಜದ ಸಹನೆಯ ಮಟ್ಟವನ್ನು ಪರೀಕ್ಷಿಸುತ್ತಿದೆ ಎಂದು ಪಾತ್ರಾ ಅವರು ಸಭೆಯಲ್ಲಿ ಹೇಳಿದ್ದರು.

ಎಂಪಿಸಿ ಸದಸ್ಯೆಯಾಗಿರುವ ಅಶೀಮಾ ಗೋಯಲ್ ಅವರು, ‘ಇಂಧನ ಮೇಲಿನ ತೆರಿಗೆಯನ್ನು ತಗ್ಗಿಸಲು ಅವಕಾಶ ಇದೆ. ಎಕ್ಸೈಸ್ ಸುಂಕವನ್ನು 2019ರ ಮಟ್ಟಕ್ಕೆ ತಗ್ಗಿಸಬಹುದು’ ಎಂದು ಹೇಳಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.