ADVERTISEMENT

ಫ್ರಾನ್ಸ್ ಮೂಲದ ಆಲ್ಟೆನ್ ಕಂಪನಿಯಿಂದ ಮೂರು ಸಾವಿರ ಸಿಬ್ಬಂದಿ ನೇಮಕ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 15:48 IST
Last Updated 10 ಏಪ್ರಿಲ್ 2022, 15:48 IST
   

ಬೆಂಗಳೂರು: ಫ್ರಾನ್ಸ್ ಮೂಲದ ಆಲ್ಟೆನ್ ಸಮೂಹಕ್ಕೆ ಸೇರಿರುವ ‘ಆಲ್ಟೆನ್ ಇಂಡಿಯಾ’ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸುತ್ತಿದ್ದು, ಮೂರು ಸಾವಿರ ಉದ್ಯೋಗಗಳನ್ನು ಸೃಷ್ಟಿಸುತ್ತಿರುವುದಾಗಿ ಹೇಳಿದೆ.

ಮಾನವ ಸಂಪನ್ಮೂಲದ ಈ ಹೆಚ್ಚಳದಿಂದಾಗಿ ಕಂಪನಿಯ ಒಟ್ಟಾರೆ ಆದಾಯ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆ ಇದೆ. ‘ಭಾರತದಲ್ಲಿ ಸಾಕಷ್ಟು ಮಾನವ ಸಂಪನ್ಮೂಲ ಲಭ್ಯ ಇದೆ. ಹೀಗಾಗಿ, ನಮ್ಮ ಸಮೂಹವು ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಹೂಡಿಕೆ ಮಾಡಲು ನಿರ್ಧರಿಸಿದೆ’ ಎಂದು ಆಲ್ಟೆನ್ ಸಮೂಹದ ಉಪ ಸಿಇಒ ಮತ್ತು ಗ್ಲೋಬಲ್ ಹೆಡ್ ಜೆರಾಲ್ಡ್ ಅಟ್ಟಿಯಾ ಹೇಳಿದ್ದಾರೆ.

ಮೂರು ಸಾವಿರ ಸಿಬ್ಬಂದಿಯ ನೇಮಕದ ನಂತರದಲ್ಲಿ ಕಂಪನಿಯ ಒಟ್ಟು ಮಾನವ ಸಂಪನ್ಮೂಲ ಸಂಖ್ಯೆಯು 6,500ಕ್ಕೆ ತಲುಪಲಿದೆ ಎಂದು ಆಲ್ಟೆನ್ ಇಂಡಿಯಾದ ಸಿಇಒ ಉತ್ತಮ್‍ಕುಮಾರ್ ಸಂಕ್ಪಾಲ್ ಹೇಳಿದ್ದಾರೆ. ಕಂಪನಿಯು ಜಾಗತಿಕವಾಗಿ 42 ಸಾವಿರ ಉದ್ಯೋಗಿಗಳನ್ನು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.