ADVERTISEMENT

Amazon Prime Day: ಜುಲೈ 26ರಂದು ವಿಶೇಷ ಆಫರ್ ಸೇಲ್ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2021, 11:43 IST
Last Updated 9 ಜುಲೈ 2021, 11:43 IST
ಅಮೆಜಾನ್ ಎರಡು ದಿನಗಳ ಪ್ರೈಮ್ ಡೇ ಸೇಲ್ ನಡೆಸುತ್ತಿದೆ..
ಅಮೆಜಾನ್ ಎರಡು ದಿನಗಳ ಪ್ರೈಮ್ ಡೇ ಸೇಲ್ ನಡೆಸುತ್ತಿದೆ..   

ಬೆಂಗಳೂರು: ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ಎರಡು ದಿನಗಳ ಪ್ರೈಮ್ ಡೇ ಸೇಲ್ ಅನ್ನು ದೇಶದಲ್ಲಿ ಆಯೋಜಿಸುತ್ತಿದೆ.

ಜುಲೈ 26 ಮತ್ತು 27ರಂದು ಅಮೆಜಾನ್ ಪ್ರೈಮ್ ಆಫರ್ ಸೇಲ್ ನಡೆಯಲಿದೆ. ಈ ಸಂದರ್ಭದಲ್ಲಿ 300ಕ್ಕೂ ಅಧಿಕ ಹೊಸ ಉತ್ಪನ್ನಗಳು ಅಮೆಜಾನ್‌ನಲ್ಲಿ ಬಿಡುಗಡೆಯಾಲಿದೆ.

ಗೃಹಬಳಕೆಯ ಉತ್ಪನ್ನ, ಎಲೆಕ್ಟ್ರಾನಿಕ್ಸ್, ಗ್ಯಾಜೆಟ್, ಫ್ಯಾಶನ್, ಅಡುಗೆ ಕೋಣೆಯ ಪರಿಕರಗಳು, ಪೀಠೋಪಕರಣ, ದಿನಬಳಕೆಯ ವಸ್ತುಗಳ ಮೇಲೆ ವಿಶೇಷ ಡಿಸ್ಕೌಂಟ್ ಗ್ರಾಹಕರಿಗೆ ದೊರೆಯಲಿದೆ.

ADVERTISEMENT

ಅಮೆಜಾನ್ ಪ್ರೈಮ್ ಸದಸ್ಯತ್ವ ಇರುವ ಸದಸ್ಯರಿಗೆ ಸೇಲ್‌ನಲ್ಲಿ ಹೆಚ್ಚುವರಿ ಕೊಡುಗೆಗಳು ಲಭ್ಯವಾಗಲಿದೆ.

ಅಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ 10 ಡಿಸ್ಕೌಂಟ್, ಅಮೆಜಾನ್ ಪೇ-ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕೂಡ ಹೆಚ್ಚುವರಿ ಡಿಸ್ಕೌಂಟ್ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.