ನವದೆಹಲಿ: ಜೋಹೊ ಕಂಪನಿಯು ಅಭಿವೃದ್ಧಿಪಡಿಸಿದ ಅರಟ್ಟೈ ಆ್ಯಪ್‌ಅನ್ನು ಶುಕ್ರವಾರದಿಂದ ಈಚೆಗೆ ಒಟ್ಟು 75 ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಜನರು ಈಚಿನ ದಿನಗಳಲ್ಲಿ ಸ್ಥಳೀಯ ಆ್ಯಪ್ ಒಂದನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಡೌನ್‌ಲೋಡ್ ಮಾಡಿಕೊಂಡ ನಿದರ್ಶನಗಳಲ್ಲಿ ಇದೂ ಒಂದಾಗಿದೆ.
ಭಾರತದಲ್ಲೇ ಅಭಿವೃದ್ಧಿ ಆಗಿರುವ ಸಂದೇಶ ರವಾನೆ ಆ್ಯಪ್ ಬಳಸುವಂತೆ ಕೆಲವು ಸಚಿವರು ಕರೆ ನೀಡಿರುವ ಸಂದರ್ಭದಲ್ಲಿ ಇಷ್ಟು ಸಂಖ್ಯೆಯಲ್ಲಿ ಈ ಆ್ಯಪ್ ಡೌನ್‌ಲೋಡ್ ಆಗಿದೆ.
ಗೂಗಲ್‌ನ ಪ್ಲೇಸ್ಟೋರ್ ಹಾಗೂ ಆ್ಯಪಲ್‌ನ ಆ್ಯಪ್ ಸ್ಟೋರ್ ಮೂಲಕ ಅಕ್ಟೋಬರ್ 3ರವರೆಗೆ ಒಟ್ಟು 75 ಲಕ್ಷ ಮಂದಿ ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಕಂಪನಿಯು ತಿಳಿಸಿದೆ.
ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪೀಯೂಷ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಈ ಆ್ಯಪ್‌ಅನ್ನು ಬಹಿರಂಗವಾಗಿ ಬೆಂಬಲಿಸಿ ಮಾತನಾಡಿದ್ದಾರೆ. ಇದಾದ ನಂತರದಲ್ಲಿ ಈ ಆ್ಯಪ್‌ನ ಬಳಕೆ ಹೆಚ್ಚಾಗಿದೆ. ಈ ‘ಸ್ವದೇಶಿ’ ಆ್ಯಪ್‌ಅನ್ನು ವಾಟ್ಸ್‌ಆ್ಯಪ್‌ಗೆ ಪರ್ಯಾಯ ಎಂದು ಕಾಣಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.