ಬೆಂಗಳೂರು: ಅರಿಸ್ಟೊ ಇಂಡಿಯಾ ಬೆಂಗಳೂರಿನಲ್ಲಿ ಸೌರಚಾಲಿತ ಕಾರ್ಖಾನೆಯನ್ನು ಪ್ರಾರಂಭಿಸಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕಾರ್ಖಾನೆಯನ್ನು ಉದ್ಘಾಟಿಸಿದ ಬಳಿಕ ಸಿಬ್ಬಂದಿ ಜೊತೆ ಸಂವಾದ ನಡೆಸಿದರು.
ಅರಿಸ್ಟೊ ಇಂಡಿಯಾ ವಾರ್ಡ್‌ರೋಬ್, ಕಿಚನ್, ಪೀಠೋಪಕರಣ ತಯಾರಿಸುತ್ತದೆ. ಮನೆಯ ಒಳಾಂಗಣಕ್ಕೆ ಅಗತ್ಯವಾದ ವಸ್ತುಗಳನ್ನು ತಯಾರಿಸುತ್ತದೆ. ರಷ್ಯಾ, ಯುರೋಪ್, ಚೀನಾ, ಭಾರತ, ಅಮೆರಿಕ, ನ್ಯೂಜಿಲೆಂಡ್ ಸೇರಿ 16ಕ್ಕೂ ಹೆಚ್ಚು ದೇಶಗಳಲ್ಲಿ ಕಂಪನಿ ಕಾರ್ಯಾಚರಣೆ ನಡೆಸುತ್ತಿದೆ.
‘ಕಂಪನಿಯು ಹಸಿರು ಇಂಧನ ಉತ್ಪಾದನೆಯ ಗುರಿ ಹೊಂದಿದೆ. ಈ ಮೂಲಕ ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧನೆಗೆ ಪ್ರಯತ್ನಿಸುತ್ತಿದೆ. ಇದೀಗ ಬೆಂಗಳೂರಿನಲ್ಲಿ ಶೇ 100ರಷ್ಟು ಸೌರಚಾಲಿತ ಉತ್ಪಾದನಾ ಕಾರ್ಖಾನೆಯನ್ನು ಅನಾವರಣ ಮಾಡಲಾಗಿದೆ’ ಎಂದು ಕಂಪನಿಯ ಭಾರತದ ನಿರ್ದೇಶಕ ಕುರುವಿಲಾ ಕುರಿಯನ್ ಹೇಳಿದ್ದಾರೆ.
ಹೊಸ ಕಾರ್ಖಾನೆಯು ಅಂದಾಜು 2.4 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. 2025ರ ಅಂತ್ಯದ ವೇಳೆಗೆ 4 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.