ADVERTISEMENT

₹439 ಕೋಟಿ ಬಂಡವಾಳ ಸಂಗ್ರಹಿಸಿದ ಅರವಿಂದ್ ಫ್ಯಾಷನ್ಸ್‌

ಪಿಟಿಐ
Published 21 ಆಗಸ್ಟ್ 2021, 10:50 IST
Last Updated 21 ಆಗಸ್ಟ್ 2021, 10:50 IST

ನವದೆಹಲಿ: ಷೇರುಗಳನ್ನು ಮಾರಾಟ ಮಾಡುವ ಮೂಲಕ ಪ್ರವರ್ತಕರು ಮತ್ತು ವಿವಿಧ ಹೂಡಿಕೆದಾರರಿಂದ ಒಟ್ಟಾರೆ ₹ 439 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಅರವಿಂದ್ ಫ್ಯಾಷನ್ಸ್‌ ಲಿಮಿಟೆಡ್‌ (ಎಎಫ್‌ಎಲ್‌) ಶನಿವಾರ ತಿಳಿಸಿದೆ.

ಈ ಬಂಡವಾಳದಿಂದ ಕಂಪನಿಯ ಆರ್ಥಿಕ ಸ್ಥಿತಿ ಇನ್ನಷ್ಟು ಬಲಗೊಳ್ಳಲಿದ್ದು, ಕೋವಿಡ್‌ ಸಾಂಕ್ರಾಮಿಕವು ಸೃಷ್ಟಿಸಿರುವ ಅನಿಶ್ಚಿತ ಪರಿಸ್ಥಿತಿಯಲ್ಲಿಯೂ ಬೆಳವಣಿಗೆಯ ಕಾರ್ಯತಂತ್ರ ರೂಪಿಸಲು ಅನುಕೂಲ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಕಾಶ್‌ ಭನ್ಸಾಲಿ, ಐಸಿಐಸಿಐ ಪ್ರ್ಯುಡೆನ್ಶಿಯಲ್‌ ಮ್ಯೂಚುವಲ್‌ ಫಂಡ್‌, ಯುನಿವರ್ಸಿಟಿ ಆಫ್‌ ನೊಟ್ರೆ ಡೇಮ್ ಡು ಲ್ಯಾಕ್, ಜಿಪಿ ಎಮರ್ಜಿಂಗ್‌ ಮಾರ್ಕೇಟ್ಸ್‌ ಸ್ಟ್ರ್ಯಾಟೆಜೀಸ್‌ ಎಲ್‌ಪಿ, ದಿ ರಾಮ್‌ ಫಂಡ್ ಎಲ್‌ಪಿ ಸೇರಿದಂತೆ ಇನ್ನೂ ಹಲವು ಹೂಡಿಕೆದಾರರು ಬಂಡವಾಳ ಸಂಗ್ರಹದಲ್ಲಿ ಭಾಗವಹಿಸಿದ್ದರು.

ADVERTISEMENT

ವಹಿವಾಟನ್ನು ಪೂರ್ಣಗೊಳಿಸುವುದು ಷೇರುದಾರರು ಮತ್ತು ಸೆಬಿ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.