ಸಚಿವ ಪೀಯೂಷ್ ಗೋಯಲ್
ನವದೆಹಲಿ: ‘ಕೇಂದ್ರ ಸರ್ಕಾರವು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಬಲಪಡಿಸಲು ಮುಂದಾಗಿದೆ. ಹಾಗಾಗಿ, ಕಳೆದ ಹತ್ತು ತಿಂಗಳ ಅವಧಿಯಲ್ಲಿ 75 ಸಾವಿರ ಪೇಟೆಂಟ್‌ಗಳನ್ನು ಮಂಜೂರು ಮಾಡಿರುವುದು ದಾಖಲೆಯಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
75ನೇ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ನವೋದ್ಯಮಿಗಳು ಮತ್ತು ಉದ್ಯಮಿಗಳು ಜೊತೆಗೆ ಸಂವಾದ ನಡೆಸಿದ ಅವರು, ಉದ್ಯಮಗಳನ್ನು ಸರಳವಾಗಿ ನಡೆಸಲು 40 ಸಾವಿರ ನಿಯಮಗಳನ್ನು ತೆಗೆದುಹಾಕಲಾಗಿದೆ ಅಥವಾ ರದ್ದುಪಡಿಸಲಾಗಿದೆ. ಇದರಿಂದ ಉದ್ಯಮಿಗಳ ಮೇಲಿನ ಅತಿಯಾದ ಹೊರೆ ಕಡಿಮೆಯಾಗಿದೆ ಎಂದರು.
ಭಾರತೀಯ ಪೇಟೆಂಟ್ ಕಚೇರಿಯು ಪೇಟೆಂಟ್ ಮಂಜೂರು ಮಾಡುವಲ್ಲಿ ದಾಖಲೆ ಬರೆದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.