ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್
ನವದೆಹಲಿ: ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್) ದರವನ್ನು ಶೇಕಡ 3ರಷ್ಟು ಕಡಿಮೆ ಮಾಡಲಾಗಿದೆ. ಅಲ್ಲದೆ, 19 ಕೆ.ಜಿ. ತೂಕದ ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರವನ್ನು ₹24ರಷ್ಟು ತಗ್ಗಿಸಲಾಗಿದೆ.
ದೆಹಲಿಯಲ್ಲಿ ಎಟಿಎಫ್ ದರವನ್ನು ಪ್ರತಿ ಕಿಲೋ ಲೀಟರ್‌ಗೆ ₹2,414ರಷ್ಟು ಕಡಿತ ಮಾಡಲಾಗಿದೆ. ಏಪ್ರಿಲ್ 1ರಂದು ಹಾಗೂ ಮೇ 1ರಂದು ಕೂಡ ಎಟಿಎಫ್ ದರವನ್ನು ಇಳಿಕೆ ಮಾಡಲಾಗಿತ್ತು. ಭಾನುವಾರ ಆಗಿರುವ ಇಳಿಕೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಸತತ ಮೂರು ತಿಂಗಳು ದರ ಇಳಿಕೆ ಆದಂತಾಗಿದೆ.
ಎಟಿಎಫ್ ದರ ಇಳಿಕೆಯ ಪರಿಣಾಮವಾಗಿ ವಿಮಾನಯಾನ ಕಂಪನಿಗಳ ಮೇಲಿನ ಹೊರೆ ತಗ್ಗಲಿದೆ.
ದರ ಇಳಿಕೆಯ ನಂತರ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ದರವು ದೆಹಲಿಯಲ್ಲಿ ₹1,723.50 ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.