ಬೆಂಗಳೂರು: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಏಥರ್, 5 ಲಕ್ಷ ವಾಹನಗಳನ್ನು ತಯಾರಿಸಿದ ದಾಖಲೆ ಬರೆದಿರುವುದಾಗಿ ಹೇಳಿದೆ.
ತಮಿಳುನಾಡಿನ ಹೊಸೂರಿನಲ್ಲಿರುವ ತಯಾರಿಕಾ ಘಟಕದಲ್ಲಿ ಇ.ವಿ. ಸ್ಕೂಟರ್ ರಿಜ್ತಾ ವಿತರಣೆ ಮಾಡುವ ಮೂಲಕ 5 ಲಕ್ಷ ವಾಹನಗಳ ತಯಾರಿಕೆಯ ಮೈಲಿಗಲ್ಲು ಕ್ರಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ದ್ವಿಚಕ್ರ ವಾಹನವು ಕಂಪನಿ ತಯಾರಿಸಿದ 5 ಲಕ್ಷದ ವಾಹನವಾಗಿದೆ ಎಂದು ಹೇಳಿದೆ.
‘5 ಲಕ್ಷ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕೆಯ ಗಡಿ ದಾಟಿರುವುದು ಏಥರ್‌ಗೆ ಬಹುದೊಡ್ಡ ಮೈಲುಗಲ್ಲು’ ಎಂದು ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಟಿಒ ಸ್ವಪ್ನಿಲ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.