ADVERTISEMENT

ವಿದ್ಯುತ್ ಚಾಲಿತ ವಾಹನಗಳ ಮೇಲಿನ ಆಮದು ಸುಂಕ ತಗ್ಗಲಿ: ಔಡಿ

ಪಿಟಿಐ
Published 26 ಸೆಪ್ಟೆಂಬರ್ 2021, 15:21 IST
Last Updated 26 ಸೆಪ್ಟೆಂಬರ್ 2021, 15:21 IST
ಔಡಿ ಇ–ಟ್ರಾನ್‌
ಔಡಿ ಇ–ಟ್ರಾನ್‌   

ನವದೆಹಲಿ: ಭಾರತಕ್ಕೆ ಆಮದು ಮಾಡಿಕೊಳ್ಳುವ ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಮೇಲೆ ಗರಿಷ್ಠ ಸುಂಕ ಇರುವುದು ದೇಶದಲ್ಲಿ ಇ.ವಿ.ಗಳ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಐಷಾರಾಮಿ ಕಾರುಗಳನ್ನು ತಯಾರಿಸುವ, ಜರ್ಮಿನಿಯ ಔಡಿ ಕಂಪನಿ ಹೇಳಿದೆ. ಸುಂಕ ತಗ್ಗಿಸುವುದರಿಂದ ಹೆಚ್ಚು ವಾಹನಗಳನ್ನು ಮಾರಾಟ ಮಾಡಲು ಹಾಗೂ ಸ್ಥಳೀಯ ತಯಾರಿಕೆಗೆ ಹೂಡಿಕೆ ಮಾಡಲು ನೆರವಾಗಲಿದೆ ಎಂದು ತಿಳಿಸಿದೆ.

ಕಂಪನಿಯು ದೇಶದಲ್ಲಿ ಸದ್ಯ ಐದು ಇ.ವಿ.ಗಳನ್ನು ಮಾರಾಟ ಮಾಡುತ್ತಿದೆ. ಸುಂಕ ತಗ್ಗಿಸುವುದರಿಂದ ವಾಹನಗಳ ಬೆಲೆ ಕಡಿಮೆ ಮಾಡಲು ಅನುಕೂಲ ಆಗಲಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ಪಾಲು ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದೆ.

ಮೂರರಿಂದ ಐದು ವರ್ಷಗಳವರೆಗೆ ಸುಂಕದಲ್ಲಿ ರಿಯಾಯಿತಿ ದೊರೆತರೆ ಮಾರಾಟ ಹೆಚ್ಚಾಗಲಿದ್ದು, ಆಗ ಭಾರತದಲ್ಲಿಯೇ ತಯಾರಿಕೆ ಆರಂಭಿಸಲು ಹೂಡಿಕೆ ಮಾಡುವಂತೆ ನಮ್ಮ ಕೇಂದ್ರ ಕಚೇರಿಗೆ ಮನವರಿಕೆ ಮಾಡಲು ಸಾಧ್ಯ ಎಂದು ಕಂಪನಿಯ ಭಾರತದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.