ADVERTISEMENT

ಆಗಸ್ಟ್ 6, 7 ಅಮೆಜಾನ್ ಪ್ರೈಮ್ ಡೇ ಮಾರಾಟ: 300 ಹೊಸ ಉತ್ಪನ್ನಗಳು ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 12:16 IST
Last Updated 23 ಜುಲೈ 2020, 12:16 IST
   

ಬೆಂಗಳೂರು: ಭಾರತದಲ್ಲಿರುವ ತನ್ನ ಪ್ರೈಮ್‌ ಸದಸ್ಯರರಿಗೆ ಅತ್ಯುತ್ತಮ ಶಾಪಿಂಗ್‌ ಮತ್ತು ಮನರಂಜನೆ ಸೌಲಭ್ಯ ಒದಗಿಸುವ ಸಲುವಾಗಿ, ಇ–ಕಾಮರ್ಸ್‌ ದೈತ್ಯ ಸಂಸ್ಥೆಅಮೆಜಾನ್ ಎರಡು ದಿನಗಳ ಪ್ರೈಮ್‌ ಡೇ ಮಾರಾಟ ಘೋಷಿಸಿದೆ.

ಪ್ರೈಮ್‌‌ಡೇ ಆಫರ್‌ಗಳು ಆಗಸ್ಟ್‌ 6 ರಿಂದ 7ರ ಮಧ್ಯರಾತ್ರಿ 12ರ ವರೆಗೆ ಲಭ್ಯವಿರಲಿವೆ.ಈ ವೇಳೆ ಖರೀದಿಸುವ ಹಲವು ಉತ್ಪನ್ನಗಳಿಗೆ ₹ 200 ಅಥವಾ ಶೇ.20 ರವರೆಗೆ ರಿಯಾಯಿತಿ ಸಿಗಲಿದೆ ಎಂದು ಅಮೆಜಾನ್‌ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಯಾಮ್‌ಸಂಗ್‌, ಪ್ರೆಸ್ಟೀಜ್‌, ಗೋದ್ರೇಜ್‌, ಫಿಲಿಪ್ಸ್ಸ್ ಸೇರಿದಂತೆ ಹಲವು ಬ್ರಾಂಡ್‌ಗಳ ಸುಮಾರು 300ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಲಿದ್ದು,ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರ ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಹೆಚ್ಚಿನ ರಿಯಾಯಿತಿ ಇರಲಿದೆ.ಪ್ರೈಮ್‌ ಡೇ ಪ್ರಯುಕ್ತದೇಶದ ಪ್ರಮುಖ ಲೇಖಕರ 11 ಪುಸ್ತಕಗಳು ವೇಳೆ ಬಿಡುಗಡೆಯಾಗಲಿವೆ.

ADVERTISEMENT

ಪ್ರೈಮ್‌ ಡೇ ಆರಂಭವಾಗುವ ವರೆಗೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಹಲವು ಉತ್ಪನ್ನಗಳಿಗೆ ₹ 200 / ಶೇ.20 ರಷ್ಟು ಕ್ಯಾಶ್‌ಬ್ಯಾಕ್‌ ಸೌಲಭ್ಯವಿದೆ.ಎಚ್‌ಡಿಎಫ್‌ಸಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಬಳಸಿ ಖರೀದಿಸುವ ಉತ್ಪನ್ನಗಳಿಗೆ ಶೇ. 10 ರಷ್ಟು ಡಿಸ್ಕೌಂಟ್‌ ಸಿಗಲಿದೆ.

ಜುಲೈ22ರಿಂದ ಪ್ರೈಮ್‌ ಡೇ ಆರಂಭದ ವರೆಗೆ ಐದು ಹೊಸ ಸಿನಿಮಾಗಳು(ವಿದ್ಯಾಬಾಲನ್‌ ನಟನೆಯ ಶಕುಂತಲಾ ದೇವಿ (ಜುಲೈ 31), ನಾಸಿರುದ್ದೀನ್‌ ಶಾ ನಟನೆಯ ಬಂದಿಷ್ ಬ್ಯಾಂಡಿಟ್ಸ್ (ಆಗಸ್ಟ್‌ 43)‌, ಇಂಗ್ಲಿಷ್‌ನ ಜೆಮಿನಿ ಮ್ಯಾನ್ (ಜುಲೈ 22)‌ ಹಾಗೂ ಬರ್ಡ್‌ ಆಫ್‌ ಪ್ರೇ (ಜುಲೈ 29) ಮತ್ತು ಕನ್ನಡದ ಫ್ರೆಂಚ್‌ ಬಿರಿಯಾನಿ (ಜುಲೈ 24) ಬಿಡುಗಡೆಯಾಗಲಿವೆ.

ಭಾರತವೂ ಸೇರಿದಂತೆ ಸುಮಾರು 18 ದೇಶಗಳಲ್ಲಿ 15 ಕೋಟಿಗೂ ಹೆಚ್ಚು ಜನರು ಅಮೆಜಾನ್‌ಪ್ರೈಮ್ ಸದಸ್ಯತ್ವ ಪಡೆದಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.