ADVERTISEMENT

ರೆಪೊ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್‌ಗಳು

ಪಿಟಿಐ
Published 10 ಜೂನ್ 2022, 19:31 IST
Last Updated 10 ಜೂನ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೆಪೊ ದರವನ್ನು ಆರ್‌ಬಿಐ ಹೆಚ್ಚಿಸಿದ ನಂತರದಲ್ಲಿ, ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲದ ಮೇಲಿನ ಬಡ್ಡಿ ದರ ಜಾಸ್ತಿ ಮಾಡಿವೆ.

ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಬಡ್ಡಿ ದರ ಹೆಚ್ಚಿಸಿವೆ.

ಆರ್‌ಬಿಐ ಬುಧವಾರ ರೆಪೊ ದರವನ್ನು ಶೇ 0.50ರಷ್ಟು ಜಾಸ್ತಿ ಮಾಡಿದೆ. ಐಸಿಐಸಿಐ ಬ್ಯಾಂಕ್ ರೆಪೊ ಆಧಾರಿತ ಇಬಿಎಲ್‌ಆರ್ ದರವನ್ನು ಜೂನ್‌ 8ರಿಂದ ಅನ್ವಯವಾಗುವಂತೆ ಶೇ 8.60ಕ್ಕೆ ಹೆಚ್ಚಿಸಿದೆ. ಇದು ಶೇ 8.10ರಷ್ಟು ಇತ್ತು.

ADVERTISEMENT

ಪಂಜಾಬ್‌ ನ್ಯಾಷನಲ್ ಬ್ಯಾಂಕ್ ರೆ‍‍ಪೊ ಆಧಾರಿತ ಸಾಲದ ಬಡ್ಡಿ ದರವನ್ನು (ಆರ್‌ಎಲ್‌ಎಲ್‌ಆರ್‌) ಶೇ 7.40ಕ್ಕೆ ಜಾಸ್ತಿ ಮಾಡಿದೆ. ಇದು ಶೇ 6.90ರಷ್ಟು ಇತ್ತು. ಬ್ಯಾಂಕ್‌ ಆಫ್ ಬರೋಡಆರ್‌ಎಲ್‌ಎಲ್‌ಆರ್‌ ದರವನ್ನು ಶೇ 7.40ಕ್ಕೆ ಜಾಸ್ತಿ ಮಾಡಿದೆ.

ಇಂಡಿಯನ್ ಬ್ಯಾಂಕ್‌ ಆರ್‌ಎಲ್‌ಎಲ್‌ಆರ್ ದರವನ್ನು ಶೇ 7.70ಕ್ಕೆ, ಬ್ಯಾಂಕ್ ಆಫ್ ಇಂಡಿಯಾ ಶೇ 7.75ಕ್ಕೆ ಹೆಚ್ಚಿಸಿವೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಆರ್‌ಎಲ್ಎಲ್‌ಆರ್ ದರವನ್ನು ಶೇ 7.70ಕ್ಕೆ ಹೆಚ್ಚಿಸಿದೆ. ಇದು ಶೇ 7.20ರಷ್ಟು ಇತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆರ್‌ಬಿಐ ತೀರ್ಮಾನಕ್ಕೂ ಮೊದಲೇ ಇಬಿಎಲ್‌ಆರ್ ದರವನ್ನು ಶೇ 7.05ಕ್ಕೆ ಏರಿಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.