ADVERTISEMENT

ಓಲಾ, ಉಬರ್ ಸೇರಿದಂತೆ ಆನ್‌ಲೈನ್ ಮೂಲಕ ಪಡೆವ ಆಟೊರಿಕ್ಷಾ ಸೇವೆಗೆ ಇನ್ಮುಂದೆ ತೆರಿಗೆ

ಪಿಟಿಐ
Published 27 ನವೆಂಬರ್ 2021, 4:25 IST
Last Updated 27 ನವೆಂಬರ್ 2021, 4:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಓಲಾ, ಊಬರ್ ಸೇರಿದಂತೆಇ–ವಾಣಿಜ್ಯ ವೇದಿಕೆಗಳ ಮೂಲಕ ನೀಡುವ ಆಟೊ ರಿಕ್ಷಾ ಸೇವೆಗಳಿಗೆ ಜನವರಿ 1ರಿಂದ ಶೇಕಡ 5ರಷ್ಟು ಜಿಎಸ್‌ಟಿ ಅನ್ವಯ ಆಗಲಿದೆ.

ಇ–ವಾಣಿಜ್ಯ ವೇದಿಕೆಗಳ ಮೂಲಕ ಆಟೊ ರಿಕ್ಷಾ ಸೇವೆ ಒದಗಿಸುವುದಕ್ಕೆ ಇದ್ದ ಜಿಎಸ್‌ಟಿ ವಿನಾಯಿತಿಯನ್ನು ಹಿಂದಕ್ಕೆ ಪಡೆಯುವ ವಿಚಾರವನ್ನು ಕೇಂದ್ರ ಹಣಕಾಸು ಸಚಿವಾಲಯದ ಅಧೀನದ ರೆವೆನ್ಯು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಆಟೊ ಚಾಲಕರು ಆಫ್‌ಲೈನ್‌ ಮೂಲಕ ನೀಡುವ ಸೇವೆಗಳಿಗೆ ಜಿಎಸ್‌ಟಿ ವಿನಾಯಿತಿಯು ಮುಂದುವರಿಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.