ADVERTISEMENT

ಲಾಕ್‌ಡೌನ್‌: ಜೂನ್‌ನಲ್ಲಿ ವಾಹನ ಮಾರಾಟ ಇಳಿಕೆ

ಪಿಟಿಐ
Published 1 ಜುಲೈ 2020, 14:01 IST
Last Updated 1 ಜುಲೈ 2020, 14:01 IST
ವಾಹನ ಮಾರಾಟ
ವಾಹನ ಮಾರಾಟ   

ನವದೆಹಲಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಜೂನ್‌ ತಿಂಗಳ ಮಾರಾಟವು ಇಳಿಕೆ ಕಂಡಿದೆ.

ದೇಶದಾದ್ಯಂತ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ತಯಾರಿಕೆ ಮತ್ತು ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿಗಳು ಹೇಳಿವೆ.

ಮಾರುತಿ ಸುಜುಕಿ ಕಂಪನಿಯ ಒಟ್ಟಾರೆ ಮಾರಾಟ ಶೇ 54ರಷ್ಟು ಕಡಿಮೆಯಾಗಿದೆ. ದೇಶಿ ಮಾರಾಟ, ರಫ್ತು ಸಹ ಇಳಿಕೆಯಾಗಿದೆ.ಮೊದಲ ತ್ರೈಮಾಸಿಕದಲ್ಲಿ ಮಾರಾಟವು ಶೇ 81ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ.

ADVERTISEMENT

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಒಟ್ಟಾರೆ ಮಾರಾಟ ಶೇ 55ರಷ್ಟು ಇಳಿಕೆಯಾಗಿದೆ.

ಹುಂಡೈ ಮೋಟರ್‌ ಇಂಡಿಯಾದ ಪ್ರಯಾಣಿಕ ವಾಹನ ಮಾರಾಟ ಶೇ 54.39ರಷ್ಟು ಕಡಿಮೆಯಾಗಿದೆ.

ದೇಶಿ ಮಾರಾಟ ಇಳಿಕೆ (%)

ಮಾರುತಿ 53.7,ಮಹೀಂದ್ರಾ 53,ಟೊಯೋಟಾ 63.53,ಟಿವಿಎಸ್ 36,ಹೀರೊಮೋಟೊ 26.88.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.