ADVERTISEMENT

ವಾಹನ ವಲಯದ ವರಮಾನ ಇಳಿಕೆ

ಪಿಟಿಐ
Published 1 ಜುಲೈ 2020, 15:52 IST
Last Updated 1 ಜುಲೈ 2020, 15:52 IST
ವಾಹನ ವಲಯ
ವಾಹನ ವಲಯ   

ನವದೆಹಲಿ: ವಾಹನ ವಲಯದ ವರಮಾನವು ಜನವರಿ–ಮಾರ್ಚ್‌ ಅವಧಿಯಲ್ಲಿ ಶೇ 15ರಷ್ಟು ಇಳಿಕೆ ಕಂಡಿದೆ ಎಂದು ಇಂಡಿಯಾ ರೇಟಿಂಗ್ಸ್‌ ಮತ್ತು ರಿಸರ್ಚ್‌ ಹೇಳಿದೆ.

ವಾಹನೋದ್ಯಮದ 14 ವಲಯಗಳಒಟ್ಟಾರೆ 417 ಕಂಪನಿಗಳ ಮಾಹಿತಿ ಕಲೆಹಾಕಿದ್ದು, ಅದರಲ್ಲಿ 190 ಕಂಪನಿಗಳು 2020ರ ಜೂನ್‌ 27ರ ಅಂತ್ಯಕ್ಕೆ ನಾಲ್ಕನೇ ತ್ರೈಮಾಸಿಕದ ವರದಿ ಸಲ್ಲಿಸಿವೆ. ಇದರ ಆಧಾರದ ಮೇಲೆ ಮಾಹಿತಿ ನೀಡಿದೆ.

ಕೋವಿಡ್‌ ಬಿಕ್ಕಟ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ನೋಂದಾಯಿತ ಕಂಪನಿಗಳಿಗೆ ತಮ್ಮ ಆರ್ಥಿಕ ಸಾಧನೆಯ ವರದಿ ಸಲ್ಲಿಸಲು ಜುಲೈ 31ರವರೆಗೆ ಅವಕಾಶ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.