ಸಾಂದರ್ಭಿಕ ಚಿತ್ರ
ಎ.ಐ ಚಿತ್ರ
ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ವಿಮಾನಯಾನ ಉದ್ಯಮವು ₹9,500 ಕೋಟಿಯಿಂದ ₹10,500 ಕೋಟಿವರೆಗೆ ನಷ್ಟ ಕಾಣಬಹುದು ಎಂದು ರೇಟಿಂಗ್ ಸಂಸ್ಥೆ ಐಸಿಆರ್‌ಎ ಅಂದಾಜಿಸಿದೆ.
ಭೌಗೋಳಿಕ ರಾಜಕೀಯ ಬಿಕ್ಕಟ್ಟು ಇದಕ್ಕೆ ಕಾರಣ ಎಂದು ಹೇಳಿದೆ. ಉದ್ಯಮವು 2021–22ರಲ್ಲಿ ₹21,600 ಕೋಟಿ ಮತ್ತು 2022–23ರಲ್ಲಿ ₹17,900 ಕೋಟಿ ನಷ್ಟ ಕಂಡಿದೆ ಎಂದು ಗುರುವಾರ ತಿಳಿಸಿದೆ.
ದೇಶೀಯ ಮಾರ್ಗದಲ್ಲಿ ವಿಮಾನ ಪ್ರಯಾಣಿಕರ ಸಂಚಾರ 17.6 ಕೋಟಿಯಾಗಬಹುದು. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6ರಷ್ಟು ಹೆಚ್ಚಳ ಎಂದು ತಿಳಿಸಿದೆ. ಜೂನ್ ತ್ರೈಮಾಸಿಕದಲ್ಲಿ ಪ್ರಯಾಣಿಕರ ಸಂಚಾರ ಶೇ 4.4ರಷ್ಟಿತ್ತು.
ಏರ್ ಇಂಡಿಯಾ ವಿಮಾನ ದುರಂತವು ಪ್ರಯಾಣದ ಹಿಂಜರಿಕೆಗೆ ಕಾರಣವಾಯಿತು. ಅಮೆರಿಕದ ಸುಂಕದಿಂದ ಉಂಟಾಗುವ ವ್ಯಾಪಾರ ಅಡಚಣೆಗಳು ಮುಂಬರುವ ತ್ರೈಮಾಸಿಕಗಳಲ್ಲಿ ವ್ಯಾಪಾರದ ಭಾವನೆಗಳನ್ನು ಕುಗ್ಗಿಸುವ ಸಾಧ್ಯತೆಯಿದೆ. ಇದು ಪ್ರಯಾಣಿಕರ ಸಂಚಾರ ಇಳಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.