ಎಕ್ಸಿಸ್
ನವದೆಹಲಿ: ಎಕ್ಸಿಸ್ ಬ್ಯಾಂಕ್‌ನ ಜೂನ್ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 4ರಷ್ಟು ಇಳಿಕೆ ಆಗಿದೆ. ಈ ತ್ರೈಮಾಸಿಕದಲ್ಲಿ ಬ್ಯಾಂಕ್ ₹5,806 ಕೋಟಿ ನಿವ್ವಳ ಲಾಭ ಗಳಿಸಿದೆ. ಎನ್‌ಪಿಎ ಪ್ರಮಾಣ ತುಸು ಹೆಚ್ಚಾಗಿದ್ದುದು ಲಾಭ ಇಳಿಕೆಗೆ ಕಾರಣ.
ಬ್ಯಾಂಕ್‌ನ ಒಟ್ಟು ವರಮಾನವು ಜೂನ್ ತ್ರೈಮಾಸಿಕದಲ್ಲಿ ₹38,322 ಕೋಟಿಗೆ ಏರಿಕೆ ಕಂಡಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ವರಮಾನವು ₹35,844 ಕೋಟಿ ಆಗಿತ್ತು.
ಬ್ಯಾಂಕ್ ನೀಡಿರುವ ಒಟ್ಟು ಸಾಲಕ್ಕೆ ಹೋಲಿಸಿದರೆ ಎನ್‌ಪಿಎ ಆಗಿರುವ ಸಾಲದ ಪ್ರಮಾಣವು ಶೇ 1.57ಕ್ಕೆ ಹೆಚ್ಚಳ ಕಂಡಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇ 1.54ರಷ್ಟು ಇತ್ತು. ನಿವ್ವಳ ಎನ್‌ಪಿಎ ಪ್ರಮಾಣವು ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 0.34ರಷ್ಟು ಇದ್ದಿದ್ದು ಈ ಬಾರಿ ಶೇ 0.45ಕ್ಕೆ ಹೆಚ್ಚಳ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.