ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಎಕ್ಸಿಸ್ ಬ್ಯಾಂಕ್ ನಿವ್ವಳ ಲಾಭ ಶೇ 26ರಷ್ಟು ಇಳಿಕೆಯಾಗಿದೆ.
ಕಳೆದ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ ₹6,917 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹5,089 ಕೋಟಿ ಲಾಭ ಗಳಿಸಲಾಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಬುಧವಾರ ತಿಳಿಸಿದೆ.
ಬ್ಯಾಂಕ್‌ನ ನಿವ್ವಳ ಬಡ್ಡಿ ವರಮಾನ (ಎನ್‌ಐಐ) ₹13,745 ಕೋಟಿ ಆಗಿದೆ. ಕಾರ್ಯಾಚರಣೆ ಲಾಭವು ಶೇ 3ರಷ್ಟು ಇಳಿಕೆಯಾಗಿ, ₹10,413 ಕೋಟಿಯಾಗಿದೆ.
ವೆಚ್ಚವು ಶೇ 5ರಷ್ಟು ಏರಿಕೆ ಆಗಿದೆ. ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‌ಪಿಎ) ಶೇ 1.46ರಷ್ಟಾಗಿದೆ. ನಿವ್ವಳ ಎನ್‌ಪಿಎ ಶೇ 0.44ರಷ್ಟಿದ್ದು, ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 0.34ರಷ್ಟಿತ್ತು ಎಂದು ಬ್ಯಾಂಕ್ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ್ದ ಕಾರಣವೊಂದಕ್ಕೆ ತೆಗೆದಿರಿಸಬೇಕಿರುವ ಮೊತ್ತವು ಜಾಸ್ತಿಯಾದ ಪರಿಣಾಮವಾಗಿ ಲಾಭದ ಪ್ರಮಾಣ ಇಳಿಕೆ ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.