ADVERTISEMENT

ಬೆಂಗಳೂರು–ನಾಗ್ಪುರ ವಿಮಾನ: ಡಿಸೆಂಬರ್‌ 1ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:37 IST
Last Updated 8 ನವೆಂಬರ್ 2025, 15:37 IST
ಏರ್‌ ಇಂಡಿಯಾ ಎಕ್ಸ್‌ಪ್ರೆಸ್
ಏರ್‌ ಇಂಡಿಯಾ ಎಕ್ಸ್‌ಪ್ರೆಸ್   

ಬೆಂಗಳೂರು: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಕಂಪನಿಯು ಬೆಂಗಳೂರು ಮತ್ತು ಮಹಾರಾಷ್ಟ್ರದ ನಾಗ್ಪುರ ನಡುವೆ ಡಿಸೆಂಬರ್‌ 1ರಿಂದ ಹೊಸದಾಗಿ ವಿಮಾನ ಸೇವೆ ಆರಂಭಿಸಲಿದೆ.

ನವದೆಹಲಿ ಮತ್ತು ಪುಣೆಯಿಂದ ಅಬುಧಾಬಿಗೆ ಡಿಸೆಂಬರ್‌ 2ರಿಂದ ಹೊಸ ವಿಮಾನ ಸಂಚಾರ ಸಹ ಆರಂಭಿಸಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ಶನಿವಾರ ತಿಳಿಸಿದೆ.

ಬೆಂಗಳೂರಿನಿಂದ ನಾಗ್ಪುರಕ್ಕೆ ಪ್ರತಿನಿತ್ಯ ಎರಡು ವಿಮಾನಗಳು ಸಂಚರಿಸಲಿವೆ. ಮೊದಲ ವಿಮಾನವು ಬೆಂಗಳೂರಿನಿಂದ ಬೆಳಿಗ್ಗೆ 7.25ಕ್ಕೆ ಹೊರಟು, 09.30ಕ್ಕೆ ನಾಗ್ಪುರ ತಲುಪಲಿದೆ. ಮತ್ತೊಂದು ವಿಮಾನವು ಸಂಜೆ 6.30ಕ್ಕೆ ಹೊರಟು ರಾತ್ರಿ 8.35ಕ್ಕೆ ತಲುಪಲಿದೆ.

ADVERTISEMENT

ನಾಗ್ಪುರದಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಬೆಂಗಳೂರಿಗೆ 12.05ಕ್ಕೆ ತಲು‍ಪಲಿದೆ. ಮತ್ತೊಂದು ವಿಮಾನ ರಾತ್ರಿ 9.05ಕ್ಕೆ ಹೊರಟು 11.10ಕ್ಕೆ ಬೆಂಗಳೂರಿಗೆ ಬರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಬುಧಾಬಿಗೆ ವಿಮಾನ:

ಇದು ನವದೆಹಲಿಯಿಂದ ಬೆಳಿಗ್ಗೆ 10.10ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಅಬುಧಾಬಿ ತಲುಪಲಿದೆ. ಅಬುಧಾಬಿಯಿಂದ 1.40ಕ್ಕೆ ಹೊರಟು ನವದೆಹಲಿಗೆ ಸಂಜೆ 7.10ಕ್ಕೆ ತಲುಪಲಿದೆ. ಈ ಸೇವೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಮಾತ್ರ ಇರಲಿದೆ. 

ಪುಣೆಯಿಂದ ರಾತ್ರಿ 8.50ಕ್ಕೆ ಹೊರಡುವ ವಿಮಾನವು ಅಬುಧಾಬಿಗೆ 10.45ಕ್ಕೆ ತಲುಪಲಿದೆ. ಅಬುಧಾಬಿಯಿಂದ ರಾತ್ರಿ 11.45ಕ್ಕೆ ಹೊರಡುವ ವಿಮಾನವು ಬೆಳಿಗ್ಗೆ 04.15ಕ್ಕೆ ತಲುಪಲಿದೆ. ಈ ಸೇವೆ ಮಂಗಳವಾರ, ಗುರುವಾರ ಮತ್ತು ಶನಿವಾರ ಇರಲಿದೆ ಎಂದು ತಿಳಿಸಿದೆ. ಈಗಾಗಲೇ ಟಿಕೆಟ್ ಬುಕಿಂಗ್‌ ಆರಂಭವಾಗಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.