ADVERTISEMENT

ಬ್ಯಾಂಕ್‌ ಸಾಲ; ಶೇ 13ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 17:32 IST
Last Updated 12 ಏಪ್ರಿಲ್ 2019, 17:32 IST
ಬ್ಯಾಂಕ್‌ ಸಾಲ
ಬ್ಯಾಂಕ್‌ ಸಾಲ   

ಮುಂಬೈ: 2018–19ನೆ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳು ವಿತರಿಸಿದ ಸಾಲದ ಪ್ರಮಾಣವು ಎರಡಂಕಿಯಷ್ಟು ಹೆಚ್ಚಾಗಿದೆ.

ಸತತ ಎರಡನೆ ವರ್ಷ ಈ ಏರಿಕೆ ಕಂಡು ಬಂದಿದೆ. 2017ರಲ್ಲಿನ ಬೆಳವಣಿಗೆ ಪ್ರಮಾಣವು ಕೇವಲ ಶೇ 4.54ರಷ್ಟಿತ್ತು. ಐದು ದಶಕ
ಗಳಲ್ಲಿನ ಅತ್ಯಂತ ಕನಿಷ್ಠ ಮಟ್ಟವೂ ಅದಾಗಿತ್ತು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2019ರ ಮಾರ್ಚ್‌ 29ರ ವೇಳೆಗೆ ಬ್ಯಾಂಕ್‌ ಸಾಲ ನೀಡಿಕೆ ಪ್ರಮಾಣವು ₹ 97.67 ಲಕ್ಷ ಕೋಟಿಗಳಷ್ಟಾಗಿ ಶೇ 13.24ರಷ್ಟು ಏರಿಕೆ ಕಂಡಿತ್ತು. ಠೇವಣಿಗಳ ಪ್ರಮಾಣವು ಶೇ 10.03ರಷ್ಟು ಹೆಚ್ಚಾಗಿ ₹ 125.72 ಲಕ್ಷ ಕೋಟಿಗೆ ತಲುಪಿತ್ತು.

ADVERTISEMENT

ವರ್ಷದ ಹಿಂದಿನ ಇದೇ ಅವಧಿಯಲ್ಲಿ ಠೇವಣಿ ಪ್ರಮಾಣವು ₹ 114.26 ಲಕ್ಷ ಕೋಟಿಗಳಷ್ಟಿತ್ತು. ಸಾಲ ನೀಡಿಕೆ ಪ್ರಮಾಣವು ₹ 86.25 ಲಕ್ಷ ಕೋಟಿಗಳಷ್ಟಿತ್ತು. ಬ್ಯಾಂಕ್‌ ಸಾಲ ನೀಡಿಕೆ ಪ್ರಮಾಣವು 2017ರಲ್ಲಿ ₹ 78.41 ಲಕ್ಷ ಕೋಟಿಗಳಷ್ಟಾಗಿ ಶೇ 4.54ರಷ್ಟು ಮಾತ್ರ ಏರಿಕೆ ಕಂಡಿತ್ತು. 1963 ಹಣಕಾಸು ವರ್ಷದ ನಂತರದ ಅತಿ ಕಡಿಮೆ ಮಟ್ಟ ಇದಾಗಿತ್ತು.

ಠೇವಣಿಗಳು: ಹಣಕಾಸು ವರ್ಷ 2017ರಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಒಟ್ಟಾರೆ ಠೇವಣಿ ಪ್ರಮಾಣವು ಶೇ 6.7ರಷ್ಟು ಏರಿಕೆ ಕಂಡಿತ್ತು.

ಗರಿಷ್ಠ ಬೆಲೆಯ ನೋಟುಗಳ ರದ್ದತಿಯಿಂದಾಗಿ 2016ರ ನವೆಂಬರ್ – ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳಲ್ಲಿ ₹ 15.28 ಲಕ್ಷ ಕೋಟಿ ಠೇವಣಿ ಇರಿಸಲಾಗಿತ್ತು. ಇದರಿಂದಾಗಿ 2017ರ ವರ್ಷಾಂತ್ಯಕ್ಕೆ ಠೇವಣಿಗಳ ಪ್ರಮಾಣವು ಶೇ 15.8ರಷ್ಟು ಹೆಚ್ಚಾಗಿ ₹ 108 ಲಕ್ಷ ಕೋಟಿಗೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.