ADVERTISEMENT

ಜ.31ರಿಂದ ಎರಡು ದಿನ ಬ್ಯಾಂಕ್‌ ಮುಷ್ಕರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 15:29 IST
Last Updated 15 ಜನವರಿ 2020, 15:29 IST
   

ನವದೆಹಲಿ (ಪಿಟಿಐ): ವೇತನ ಪರಿಷ್ಕರಣೆಗೆ ಒತ್ತಾಯಿಸಿ ಬ್ಯಾಂಕ್‌ ನೌಕರರ ಸಂಘಟನೆಗಳು ಇದೇ 31 ರಿಂದ ಎರಡು ದಿನಗಳ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿವೆ.

ಒಂಬತ್ತು ಬ್ಯಾಂಕ್‌ ಕಾರ್ಮಿಕ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಈ ಮುಷ್ಕರಕ್ಕೆ ಕರೆ ನೀಡಿದೆ.

ಒಂದು ವೇಳೆ ನಿಗದಿಯಂತೆ ಈ ಮುಷ್ಕರ ನಡೆದರೆ, ಸಂಸತ್ತಿನ ಬಜೆಟ್‌ ಅಧಿವೇಶನದ ಆರಂಭದ ದಿನ ಮತ್ತು 2020–21ನೇ ಹಣಕಾಸು ವರ್ಷದ ಬಜೆಟ್‌ ಮಂಡನೆ ದಿನವೇ ದೇಶದಾದ್ಯಂತ ಬ್ಯಾಂಕ್‌ಗಳ ವಹಿವಾಟಿಗೆ ತೀವ್ರ ಧಕ್ಕೆ ತಟ್ಟಲಿದೆ.

ADVERTISEMENT

ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆಯು 2017ರಿಂದ ನನೆಗುದಿಗೆ ಬಿದ್ದಿದೆ. ಭಾರತದ ಬ್ಯಾಂಕ್‌ಗಳ ಸಂಘವು (ಐಬಿಎ) ನೌಕರರ ನ್ಯಾಯೋಚಿತ ವೇತನ ಪರಿಷ್ಕರಣೆ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ‘ಯುಎಫ್‌ಬಿಯು’ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.