ADVERTISEMENT

ಬ್ಯಾಂಕುಗಳಿಗೆ ಬೇಕು ಸರ್ಕಾರದ ನೆರವು: ಫಿಚ್

ಪಿಟಿಐ
Published 27 ಜುಲೈ 2020, 12:50 IST
Last Updated 27 ಜುಲೈ 2020, 12:50 IST
   

ನವದೆಹಲಿ: ಸರ್ಕಾರದಿಂದ ಹೆಚ್ಚಿನ ಹಣಕಾಸು ನೆರವು ಸಿಗದೆ ಇದ್ದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ನಿರೀಕ್ಷಿತ ಸವಾಲುಗಳನ್ನು ಎದುರಿಸಲು ಖಾಸಗಿ ಮೂಲಗಳಿಂದ ಸಂಗ್ರಹಿಸುವ ಬಂಡವಾಳವು ಸಾಕಾಗಲಿಕ್ಕಿಲ್ಲ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹ ಮಾಡುವ ಯೋಜನೆ ಇರುವುದಾಗಿ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕುಗಳು ಈಚೆಗೆ ಹೇಳಿದ್ದವು. ಹೂಡಿಕೆದಾರರಲ್ಲಿ ಅಷ್ಟೊಂದು ಉತ್ಸಾಹ ಇಲ್ಲದಿರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಬಂಡವಾಳ ಸಂಗ್ರಹಿಸುವಲ್ಲಿ ಸವಾಲುಗಳು ಹೆಚ್ಚಿವೆ ಎಂದು ಫಿಚ್ ಹೇಳಿದೆ.

ಸರ್ಕಾರವು ಕೆಲವು ಬ್ಯಾಂಕುಗಳಲ್ಲಿ ತಾನು ಹೊಂದಿರುವ ಷೇರುಗಳ‍ಪ್ರಮಾಣ ಕಡಿಮೆ ಮಾಡಿಕೊಂಡರೆ, ಅದು ಠೇವಣಿದಾರರ ವಿಶ್ವಾಸ ಕುಗ್ಗಲು ಕಾರಣವಾಗಬಹುದು. ಹೂಡಿಕೆದಾರರ ಆಸಕ್ತಿಯೂ ಕಡಿಮೆ ಆಗಬಹುದು ಎಂದು ಫಿಚ್ ಹೇಳಿದೆ.

ADVERTISEMENT

‘ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಷೇರು ಮಾರಾಟವು ತೀರಾ ಸವಾಲಿನದ್ದಾಗಿರಲಿದೆ. ಈಗಿರುವ ಕಾನೂನಿನ ಅನ್ವಯ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಕನಿಷ್ಠ ಶೇಕಡ 51ರಷ್ಟು ಷೇರುಗಳು ಸರ್ಕಾರದ್ದಿರಬೇಕು. ಷೇರು ಮಾರಾಟಕ್ಕೆ ಮೊದಲು ಈ ಕಾನೂನು ತಿದ್ದುಪಡಿ ಮಾಡಬೇಕಾಗಬಹುದು’ ಎಂದೂ ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.