ADVERTISEMENT

ಬೆಂಗಳೂರು: ಕೆ.ಜಿ ರಸ್ತೆಯಲ್ಲಿ ಬಿಒಬಿ ‘ಫಿಜಿಟಲ್‌’ ಶಾಖೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 15:46 IST
Last Updated 26 ಡಿಸೆಂಬರ್ 2025, 15:46 IST
ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಕೆ.ಜಿ ರಸ್ತೆಯಲ್ಲಿ ತನ್ನ ಎರಡನೇ ಫಿಜಿಟಲ್ ಶಾಖೆಯನ್ನು ಉದ್ಘಾಟಿಸಿದೆ
ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಕೆ.ಜಿ ರಸ್ತೆಯಲ್ಲಿ ತನ್ನ ಎರಡನೇ ಫಿಜಿಟಲ್ ಶಾಖೆಯನ್ನು ಉದ್ಘಾಟಿಸಿದೆ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (ಬಿಒಬಿ), ತನ್ನ ಎರಡನೇ ಫಿಜಿಟಲ್ ಶಾಖೆಯನ್ನು ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿ ಉದ್ಘಾಟಿಸಿದೆ.

ಈ ಫಿಜಿಟಲ್ ಶಾಖೆಯು ಅದರ ವರ್ಚುವಲ್ ರಿಲೇಶನ್‌ಶಿಪ್ ಮ್ಯಾನೇಜ‌ರ್ ‘ಅದಿತಿ’ ಮೂಲಕ ವರ್ಚುವಲ್ ನೆರವು ಒದಗಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.‌

ಈ ಶಾಖೆಯಲ್ಲಿ ಗ್ರಾಹಕರು ಪ್ಯಾನ್ ನವೀಕರಣ, ಇ–ಮೇಲ್ ಮೂಲಕ ಖಾತೆ ಹೇಳಿಕೆ ಸ್ವೀಕರಿಸುವುದು, ಟಿಡಿಎಸ್ ಪ್ರಮಾಣ ಪತ್ರ ಸ್ವೀಕಾರ, ನಾಮಿನಿ ನವೀಕರಣ ಇತ್ಯಾದಿ ಸೇವೆಗಳನ್ನು ಪಡೆಯಬಹುದು ಎಂದು ಹೇಳಿದೆ.

ADVERTISEMENT

ಗೃಹ ಸಾಲದ ಬಗ್ಗೆ ವಿಚಾರಣೆ, ಉಳಿತಾಯ ಖಾತೆ, ಅವಧಿ ಠೇವಣಿ, ಕಾರು ಸಾಲ ಮುಂತಾದ ಎಲ್ಲಾ ವೈಯಕ್ತಿಕಗೊಳಿಸಿದ ಮತ್ತು ಹಣಕಾಸುಯೇತರ ಸೇವೆಗಳ ಸಹಾಯಕ್ಕಾಗಿ ಗ್ರಾಹಕರು ವಿಡಿಯೊ ಕರೆ ಮೂಲಕ ಬ್ಯಾಂಕ್‌ನ ಸಂಪರ್ಕ ಕೇಂದ್ರವನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಬ್ಯಾಂಕ್ ತಿಳಿಸಿದೆ.

‘ಕೆ.ಜಿ.ರಸ್ತೆಯಲ್ಲಿರುವ ನಮ್ಮ ಫಿಜಿಟಲ್ ಶಾಖೆಯಲ್ಲಿ ಗ್ರಾಹಕರು ದಿನನಿತ್ಯದ ಬ್ಯಾಂಕಿಂಗ್ ವಹಿವಾಟುಗಳನ್ನು ಡಿಜಿಟಲ್ ಮತ್ತು ತ್ವರಿತವಾಗಿ ಪಡೆದುಕೊಳ್ಳಬಹುದು’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ಹೇಳಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ ಬೆಂಗಳೂರು ವಲಯದ ಮುಖ್ಯ ಮಹಾಪ್ರಬಂಧಕ ಮತ್ತು ವಲಯ ಮುಖ್ಯಸ್ಥ ಮನೋಜ್ ಚಯಾನಿ, ಬೆಂಗಳೂರು ವಲಯದ ಮಹಾಪ್ರಬಂಧಕ ಅನಿಲ್ ಕುಮಾರ್ ಶ್ರೀವಾಸ್ತವ, ಉಪ ಮಹಾಪ್ರಬಂಧಕ ಮತ್ತು ಪ್ರಾದೇಶಿಕ ಮುಖ್ಯಸ್ಥ (ಬೆಂಗಳೂರು ಕೇಂದ್ರ ಪ್ರಾದೇಶಿಕ) ಶೈಲೇಂದ್ರ ಕುಮಾರ್ ಸಿಂಗ್ ಮತ್ತು ಬ್ಯಾಂಕ್‌ನ ಇತರೆ ಹಿರಿಯ ಕಾರ್ಯನಿರ್ವಾಹಕರು ಮತ್ತು ವಲಯದ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.