ADVERTISEMENT

ಭಾರತದ ಬಿಯರ್ ಉದ್ಯಮದಿಂದ ಜಿಡಿಪಿಗೆ ₹93,234 ಕೋಟಿ ಕೊಡುಗೆ: ಬಿಎಐ

ಭಾರತದ ಜಿಡಿಪಿಗೆ 2023 ನೇ ಸಾಲಿನಲ್ಲಿ ಭಾರತದ ಬಿಯರ್ ಉದ್ಯಮ ಬರೋಬ್ಬರಿ ₹93,234 ಕೋಟಿ ಕೊಡುಗೆ ನೀಡಿದೆ ಎಂದು ಬ್ರೂವರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಹೇಳಿದೆ.

ಪಿಟಿಐ
Published 7 ಫೆಬ್ರುವರಿ 2025, 15:59 IST
Last Updated 7 ಫೆಬ್ರುವರಿ 2025, 15:59 IST
ಬಿಯರ್ (ಪ್ರಾತಿನಿಧಿಕ ಚಿತ್ರ)
ಬಿಯರ್ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಭಾರತದ ಜಿಡಿಪಿಗೆ 2023 ನೇ ಸಾಲಿನಲ್ಲಿ ಭಾರತದ ಬಿಯರ್ ಉದ್ಯಮ ಬರೋಬ್ಬರಿ ₹93,234 ಕೋಟಿ ಕೊಡುಗೆ ನೀಡಿದೆ ಎಂದು ಬ್ರೂವರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಹೇಳಿದೆ.

ಈ ಪ್ರಮಾಣ ಒಟ್ಟು ಜಿಡಿಪಿಯ ಶೇ 0.3 ಎಂದು ಅಕ್ಸಫರ್ಡ್ ಎಕನಾಮಿಕ್ಸ್ ತಯಾರಿಸಿದ ವರದಿಗೆ ಅಸೋಸಿಯೇಷನ್ ತಿಳಿಸಿದೆ.

ಜಾಗತಿಕ ಜಿಡಿಪಿಗೆ ₹76 ಲಕ್ಷ ಕೋಟಿ ಕೊಡುಗೆಯನ್ನು ಬಿಯರ್ ಉದ್ಯಮ ನೀಡುತ್ತದೆ ಎಂದು ಹೇಳಿದೆ.

ADVERTISEMENT

ಭಾರತದಲ್ಲಿ ಬಿಯರ್ ಉದ್ಯಮ ಪ್ರತ್ಯಕ್ಷ ಪರೋಕ್ಷವಾಗಿ ಸುಮಾರು 13 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂದು ಬ್ರೂವರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಪ್ರಧಾನ ನಿರ್ದೇಶಕ ವಿವೇಕ್ ಗಿರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.