ಬೆಂಗಳೂರು: ಚಿನ್ನಾಭರಣಗಳ ಮಾರಾಟ ಕಂಪನಿ ಪ್ರಿನ್ಸ್ ಜುವೆಲ್ಲರಿ, ‘ಚಿನ್ನ ವಿನಿಮಯ ಉತ್ಸವ’ ಆರಂಭಿಸಿದೆ.
ಈ ಉತ್ಸವದಲ್ಲಿ ಗ್ರಾಹಕರು, ತಮ್ಮಲ್ಲಿರುವ ಹಳೆಯ ಮತ್ತು ಬಳಸದೆ ಇರುವ ಚಿನ್ನವನ್ನು ಹೊಸ ವಿನ್ಯಾಸದ ಚಿನ್ನದ ಆಭರಣದೊಂದಿಗೆ ಬದಲಾಯಿಸಿಕೊಳ್ಳಬಹುದು. ಈ ಯೋಜನೆ ಸೀಮಿತ ಅವಧಿಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.
ಈ ಯೋಜನೆಯ ಅಡಿ ಹಳೆಯ ಚಿನ್ನಾಭರಣ ಬದಲಾಯಿಸಿಕೊಂಡರೆ ಪ್ರತಿ ಗ್ರಾಂ ಗೆ ₹300ಕ್ಕೂ ಹೆಚ್ಚು ಪ್ರಯೋಜನ ಸಿಗಲಿದೆ. ಪ್ರತಿ 8 ಗ್ರಾಂ ಚಿನ್ನ ಬದಲಾಯಿಸಿಕೊಂಡರೆ ₹4,800ವರೆಗೆ ಉಳಿತಾಯ ಮಾಡಬಹುದಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.