ADVERTISEMENT

ಆನ್‌ಲೈನ್‌ ಹೂಡಿಕೆ ವೇದಿಕೆ: ಬಿಲಿಯನ್‌ಬ್ರೈನ್ಸ್ ಗರಾಜ್ ವೆಂಚರ್ಸ್‌ (ಗ್ರೋವ್‌)

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 23:30 IST
Last Updated 7 ಜನವರಿ 2026, 23:30 IST
.
.    

ಆನ್‌ಲೈನ್‌ ಹೂಡಿಕೆ ವೇದಿಕೆ ‘ಬಿಲಿಯನ್‌ಬ್ರೈನ್ಸ್ ಗರಾಜ್ ವೆಂಚರ್ಸ್‌ (ಗ್ರೋವ್‌)’ ಷೇರಿನ ಮೌಲ್ಯ ₹185 ಆಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಸಕ್ರಿಯ ಬಳಕೆದಾರರಲ್ಲಿ ಇದು ಶೇ 26.8ರಷ್ಟು ಪಾಲು ಹೊಂದಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದ ವೇಳೆಗೆ 1.48 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಶೂನ್ಯ ಕಮಿಷನ್ ಮ್ಯೂಚುವಲ್ ಫಂಡ್‌ ಆ್ಯಪ್‌ ಮೂಲಕ ಆರಂಭವಾದ ವೇದಿಕೆಯು ಪೂರ್ಣ ಪ್ರಮಾಣದಲ್ಲಿ ಸಂಪತ್ತು ನಿರ್ವಹಣಾ ಸೇವೆಗಳನ್ನು ಒದಗಿಸುತ್ತಿದೆ. ಬ್ರೋಕಿಂಗ್, ಮಾರ್ಜಿನ್ ಟ್ರೇಡಿಂಗ್ ಸೌಲಭ್ಯ, ಷೇರುಗಳು ಮತ್ತು ಮ್ಯೂಚುವಲ್‌ ಫಂಡ್‌ಗಳನ್ನು ಆಧರಿಸಿ ಸಾಲ ನೀಡುವುದು, ಹಣಕಾಸು ನಿರ್ವಹಣೆ ಸೌಲಭ್ಯಗಳನ್ನು ಇದು ಈಗ ಗ್ರಾಹಕರಿಗೆ ಒದಗಿಸುತ್ತಿದೆ.

ADVERTISEMENT

2024–25ರಿಂದ 2027–28ರ ಆರ್ಥಿಕ ವರ್ಷದವರೆಗೆ ವಾರ್ಷಿಕ ಸರಾಸರಿ ತೆರಿಗೆ ನಂತರದ ಲಾಭವು ಶೇ 30ರಷ್ಟಿರಲಿದೆ ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಬಿಲಿಯನ್ ಬ್ರೈನ್ಸ್ ಗರಾಜ್ ವೆಂಚರ್ಸ್‌ ಷೇರಿನ ಬೆಲೆ ₹161.80 ಆಗಿತ್ತು.

(ಬ್ರೋಕರೇಜ್‌ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.