
ಬೆಂಗಳೂರು: ತಂತ್ರಜ್ಞಾನ ಹಾಗೂ ಸೇವಾ ವಲಯದ ಬಾಷ್ ಲಿಮಿಟೆಡ್ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದ್ದು, ಕಂಪನಿಯ ಕಾರ್ಯಾಚರಣೆ ವರಮಾನವು ಶೇಕಡ 9.1ರಷ್ಟು ಹೆಚ್ಚಾಗಿ ₹4,795 ಕೋಟಿಗೆ ತಲುಪಿದೆ.
ಕಂಪನಿಯ ತೆರಿಗೆಪೂರ್ವ ಲಾಭವು ₹730 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ 7.9ರಷ್ಟು ಹೆಚ್ಚು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಈ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ತೆರಿಗೆ ನಂತರದ ಲಾಭವು (ಪಿಎಟಿ) ₹554 ಕೋಟಿ ಆಗಿದೆ. ಇದು ಕಂಪನಿಯ ಕಾರ್ಯಾಚರಣೆ ವರಮಾನದ ಒಟ್ಟು ಮೊತ್ತಕ್ಕೆ ಹೋಲಿಸಿದರೆ ಶೇ 11.6ರಷ್ಟಾಗುತ್ತದೆ.
‘ಈ ಬಾರಿಯ ನಮ್ಮ ಹಣಕಾಸಿನ ಫಲಿತಾಂಶವು ಆವಿಷ್ಕಾರ ಮತ್ತು ಗ್ರಾಹಕ ಸ್ನೇಹಿ ಧೋರಣೆಯ ಬಗ್ಗೆ ನಾವು ಹೊಂದಿರುವ ಬದ್ಧತೆಯನ್ನು ತೋರಿಸುತ್ತಿದೆ’ ಎಂದು ಭಾರತದಲ್ಲಿನ ಬಾಷ್ ಸಮೂಹದ ಅಧ್ಯಕ್ಷ ಹಾಗೂ ಎಂ.ಡಿ ಗುರುಪ್ರಸಾದ್ ಮುದ್ಲಾಪುರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.