ADVERTISEMENT

ಬಿಎಸ್‌ಎನ್‌ಎಲ್‌, ಏರ್‌ ಇಂಡಿಯಾಅತಿ ಹೆಚ್ಚು ನಷ್ಟದ ಕಂಪನಿಗಳು

ಪಿಟಿಐ
Published 10 ಫೆಬ್ರುವರಿ 2020, 18:13 IST
Last Updated 10 ಫೆಬ್ರುವರಿ 2020, 18:13 IST
ಏರ್‌ಇಂಡಿಯಾ, ಬಿಎಸ್‌ಎನ್‌ಎಲ್‌
ಏರ್‌ಇಂಡಿಯಾ, ಬಿಎಸ್‌ಎನ್‌ಎಲ್‌   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಏರ್ ಇಂಡಿಯಾ ಮತ್ತು ಎಂಟಿಎನ್‌ಎಲ್‌ ಕಂಪನಿಗಳು ಸತತ ಮೂರನೇ ಹಣಕಾಸು ವರ್ಷದಲ್ಲಿಯೂ ನಷ್ಟ ಕಂಡಿವೆ.

2018‌–19ರಲ್ಲಿಕೇಂದ್ರೋದ್ಯಮಗಳಲ್ಲಿಯೇ ಈ ಕಂಪನಿಗಳ ನಷ್ಟವು ಗರಿಷ್ಠ ಮಟ್ಟದಲ್ಲಿವೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಮೀಕ್ಷೆಯಲ್ಲಿ ಈ ಮಾಹಿತಿ ನೀಡಲಾಗಿದೆ.

ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯ ಜತೆಗೂಡಿ ಪ್ರತಿ ವರ್ಷವೂ ಕೇಂದ್ರೋದ್ಯಮಗಳ ಹಣಕಾಸು ಸಾಧನೆಗೆ ಸಂಬಂಧಿಸಿದ ಮಾಹಿತಿ ನೀಡುತ್ತವೆ.

ADVERTISEMENT

ನಷ್ಟದಲ್ಲಿರುವ ಒಟ್ಟಾರೆ 70 ಕಂಪನಿಗಳಲ್ಲಿ 10 ಕಂಪನಿಗಳ ನಷ್ಟದ ಪ್ರಮಾಣವೇ ಶೇ 94.04ರಷ್ಟಿದೆ.

ಎಕ್ಸೈಸ್‌, ಕಸ್ಟಮ್ಸ್‌ ಸುಂಕ, ಜಿಎಸ್‌ಟಿ, ಕಾರ್ಪೊರೇಟ್‌ ತೆರಿಗೆ, ಲಾಭಾಂಶ, ಸಾಲದ ಮೇಲಿನ ಬಡ್ಡಿದರ, ಮತ್ತು ಇತರೆ ಸುಂಕ ಮತ್ತು ತೆರಿಗೆಗಳಿಂದ ಸರ್ಕಾರದ ಬೊಕ್ಕಸಕ್ಕೆ 2018–19ರಲ್ಲಿ ₹ 3,68,803 ಕೋಟಿ ಬಂದಿದೆ. 2017–18ರಲ್ಲಿ ₹ 3,52,361 ಕೋಟಿ ಬಂದಿತ್ತು. ಇದಕ್ಕೆ ಹೋಲಿಸಿದರೆ ಶೇ 4.67ರಷ್ಟು ಹೆಚ್ಚಾಗಿದೆ.

ಲಾಭದಲ್ಲಿ3 ಕಂಪನಿಗಳು:ಒಎನ್‌ಜಿಸಿ, ಇಂಡಿಯನ್‌ ಆಯಿಲ್‌ ಮತ್ತು ಎನ್‌ಟಿಪಿಸಿ ಲಾಭದಾಯಕ ಕಂಪನಿಗಳಾಗಿವೆ. ಕೇಂದ್ರೋದ್ಯಮಗಳು ಗಳಿಸಿಕೊಂಡಿರುವ ಒಟ್ಟಾರೆ ಲಾಭದಲ್ಲಿ ಒಎನ್‌ಜಿಸಿ ಶೇ 15.3, ಇಂಡಿಯನ್‌ ಆಯಿಲ್‌ ಶೇ 9.68 ಮತ್ತು ಎನ್‌ಟಿಪಿಸಿ ಶೇ 6.73ರಷ್ಟು ಕೊಡುಗೆ ನೀಡಿವೆ.

ಕೇಂದ್ರೋದ್ಯಮಗಳ ಮಾಹಿತಿ

348

ಒಟ್ಟಾರೆ ಸಂಖ್ಯೆ

249

ಕಾರ್ಯಾಚರಣೆ ನಡೆಸುತ್ತಿರುವ

86

ನಿರ್ಮಾಣ ಹಂತದಲ್ಲಿ ಇರುವ

13

ಮುಚ್ಚುವ / ದಿವಾಳಿ ಹಂತದಲ್ಲಿ

70

ನಷ್ಟದಲ್ಲಿರುವ ಕಂಪನಿಗಳು

94.04%

ನಷ್ಟದಲ್ಲಿರುವ ಕಂಪನಿಗಳಲ್ಲಿ 10 ಕಂಪನಿಗಳ ಪಾಲು

ವರಮಾನ ಹೆಚ್ಚಳ

₹ 24,40,748 ಕೋಟಿ

2018–19ರಲ್ಲಿ

₹ 20,32,001 ಕೋಟಿ

2017–18ರಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.