ADVERTISEMENT

ವೆಚ್ಚ ಕಡಿತ: 30 ಟ್ಯೂಷನ್‌ ಕೇಂದ್ರ ಮುಚ್ಚಿದ ಬೈಜುಸ್

ಪಿಟಿಐ
Published 23 ಮಾರ್ಚ್ 2024, 14:33 IST
Last Updated 23 ಮಾರ್ಚ್ 2024, 14:33 IST
   

ನವದೆಹಲಿ: ಬೈಜುಸ್‌ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್‌ ಆ್ಯಂಡ್‌ ಲರ್ನ್‌, ದೇಶದಲ್ಲಿ ತೆರೆದಿದ್ದ ಒಟ್ಟು 292 ಟ್ಯೂಷನ್‌ ಕೇಂದ್ರಗಳ ಪೈಕಿ 30 ಕೇಂದ್ರಗಳನ್ನು ಮುಚ್ಚಿದೆ.

ಈ ಕೇಂದ್ರಗಳನ್ನು ಸ್ಥಾಪಿಸಿ ಮೂರು ವರ್ಷಗಳಾಗಿದ್ದು, ಉತ್ತಮ ಫಲಿತಾಂಶವನ್ನೂ ನೀಡುತ್ತಿವೆ. ವೆಚ್ಚದ ಪ್ರಮಾಣ ತಗ್ಗಿಸುವ ಮೂಲಕ ಕೇಂದ್ರಗಳನ್ನು ಲಾಭದಾಯಕ ಹಾದಿಯತ್ತ ಕೊಂಡೊಯ್ಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

ಕೇಂದ್ರಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬದ್ಧತೆ ಶ್ಲಾಘನೀಯವಾದುದು. ದಕ್ಷತೆಯ ಮೂಲಕ ಗುಣಮಟ್ಟದ ಬೋಧನೆಗೆ ಒತ್ತು ನೀಡಲಾಗುವುದು. ಇದು ಕೇಂದ್ರಗಳ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ ಎಂದು ತಿಳಿಸಿದೆ.

ADVERTISEMENT

‘2024–25ನೇ ಶೈಕ್ಷಣಿಕ ಸಾಲಿಗೆ ಈಗಾಗಲೇ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಕೇಂದ್ರಗಳ ಮೇಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಟ್ಟಿರುವ ನಂಬಿಕೆ, ಆತ್ಮವಿಶ್ವಾಸ ಹಾಗೂ ಬೆಂಬಲಕ್ಕೆ ಆಭಾರಿಯಾಗಿದ್ದೇವೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.