ADVERTISEMENT

ಎಂಸಿಎಲ್‌ಆರ್‌ ಮೇಲಿನ ಬಡ್ಡಿದರ ಇಳಿಸಿದ ಕೆನರಾ ಬ್ಯಾಂಕ್‌

ಪಿಟಿಐ
Published 10 ಮೇ 2025, 15:59 IST
Last Updated 10 ಮೇ 2025, 15:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧರಿತ ಸಾಲದ (ಎಂಸಿಎಲ್‌ಆರ್‌) ಮೇಲಿನ ಬಡ್ಡಿದರವನ್ನು ಶೇ 0.10ರಷ್ಟು ಕಡಿತಗೊಳಿಸಿದೆ. ಇದರಿಂದ ವಾಹನ ಮತ್ತು ವೈಯಕ್ತಿಕ ಸಾಲಗಾರರಿಗೆ ಅನುಕೂಲವಾಗಲಿದೆ. 

ಸದ್ಯ ವಾಹನ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿದರವು ಶೇ 9.10ರಿಂದ ಶೇ 9ಕ್ಕೆ ಇಳಿಕೆಯಾಗಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ತಿಳಿಸಿದೆ.

ಒಂದು, ಮೂರು ಮತ್ತು ಆರು ತಿಂಗಳ ಅವಧಿಯ ಎಂಸಿಎಲ್‌ಆರ್‌ ಶೇ 8.25ರಿಂದ ಶೇ 8.80ರ ಶ್ರೇಣಿಯಲ್ಲಿ ಇರಲಿದೆ. ಒಂದು ವರ್ಷದ ಎಂಸಿಎಲ್‌ಆರ್‌ ಶೇ 8.30ರಿಂದ ಶೇ 8.20ಕ್ಕೆ ಇಳಿಕೆಯಾಗಲಿದೆ. ಈ ಹೊಸ ಪರಿಷ್ಕೃತ ಬಡ್ಡಿದರವು ಮೇ 12ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ADVERTISEMENT

ಕಳೆದ ತಿಂಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು ಶೇ 0.25ರಷ್ಟು ಕಡಿತಗೊಳಿಸಿತ್ತು. ಇದಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ರೆಪೊ ಆಧರಿತ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.