ADVERTISEMENT

ಕಚ್ಚಾ ತೈಲ ಮೂಲಸೌಕರ್ಯ ನಿರ್ಮಾಣ: ₹2.69ಲಕ್ಷ ಕೋಟಿ ಪರಿಹಾರ ಕೇಳಿದ ಕೇಂದ್ರ ಸರ್ಕಾರ

ಪಿಟಿಐ
Published 29 ಡಿಸೆಂಬರ್ 2025, 16:09 IST
Last Updated 29 ಡಿಸೆಂಬರ್ 2025, 16:09 IST
   

ನವದೆಹಲಿ: ಕೆಜಿ–ಡಿ6 ಪ್ರದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಕಚ್ಚಾ ತೈಲ ತೆಗೆಯುವ ಮೂಲಸೌಕರ್ಯ ನಿರ್ಮಿಸಿದ ಕಾರಣಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್ ಮತ್ತು ಬಿ.ಪಿ ಕಂಪನಿಗಳು ಒಟ್ಟಾಗಿ ₹2.69 ಲಕ್ಷ ಕೋಟಿ (30 ಬಿಲಿಯನ್ ಡಾಲರ್‌) ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರ ಕೇಳಿದೆ ಎಂದು ಮೂಲಗಳು ತಿಳಿಸಿವೆ. 

14 ವರ್ಷಗಳಷ್ಟು ಹಳೆಯದಾದ ಈ ವಿವಾದದ ವಿಚಾರಣೆಯನ್ನು ಮೂವರು ಸದಸ್ಯರ ಮಧ್ಯಸ್ಥಿಕೆ ನ್ಯಾಯಮಂಡಳಿಯು ನವೆಂಬರ್ 7ರಂದು ಮುಕ್ತಾಯಗೊಳಿಸಿದೆ. ಸರ್ಕಾರವು ಮಧ್ಯಸ್ಥಿಕೆ ನ್ಯಾಯಮಂಡಳಿಯ ಎದುರು ಈ ಮನವಿ ಮಂಡಿಸಿದೆ ಎಂದು ಗೊತ್ತಾಗಿದೆ. ನ್ಯಾಯಮಂಡಳಿಯು ಈ ಪ್ರಕರಣ ಕುರಿತ ಆದೇಶವನ್ನು 2026ರಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ರಿಲಯನ್ಸ್ ಮತ್ತು ಬಿಪಿ ಕಂಪನಿಗಳು ಈ ವಿಚಾರವಾಗಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.