ADVERTISEMENT

ಕನಿಷ್ಠ ಬೆಂಬಲ ಬೆಲೆಯಡಿ ಸೋಯಾಬಿನ್‌ ದಾಖಲೆ ಖರೀದಿ: ಕೇಂದ್ರ

ಪಿಟಿಐ
Published 16 ಜನವರಿ 2025, 12:59 IST
Last Updated 16 ಜನವರಿ 2025, 12:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಇಲ್ಲಿಯವರೆಗೆ ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್‌ಪಿ) 13.73 ಲಕ್ಷ ಟನ್‌ನಷ್ಟು ಸೋಯಾಬಿನ್‌ ಖರೀದಿಸಿರುವುದು ದಾಖಲೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಎಂಎಸ್‌ಪಿ ಅಡಿ ಸೋಯಾಬಿನ್‌ ಖರೀದಿಸಲಾಗುತ್ತದೆ. 2018–19ರಲ್ಲಿ 19,483 ಟನ್‌ ಖರೀದಿಸಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು ಎಂದು ಹೇಳಿದ್ದಾರೆ.

ನಾಫೆಡ್‌ ಮತ್ತು ಎನ್‌ಸಿಸಿಎಫ್‌ ಮೂಲಕ ಸೋಯಾಬಿನ್‌ ಖರೀದಿಸಲಾಗುತ್ತಿದೆ. ಪ್ರತಿ ಕ್ವಿಂಟಲ್‌ಗೆ ₹4,892 ಎಂಎಸ್‌ಪಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮಧ್ಯಪ್ರದೇಶದಲ್ಲಿ 6.22 ಲಕ್ಷ ಟನ್‌, ಮಹಾರಾಷ್ಟ್ರ 5.39 ಲಕ್ಷ ಟನ್‌, ತೆಲಂಗಾಣ 83,075 ಟನ್‌, ರಾಜಸ್ಥಾನ 67,268 ಟನ್‌, ಗುಜರಾತ್ 43,210 ಟನ್‌ ಮತ್ತು ಕರ್ನಾಟಕದಲ್ಲಿ 18,282 ಟನ್ ಖರೀದಿಸಲಾಗಿದೆ ಎಂದು ವಿವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.