ADVERTISEMENT

ಡಬ್ಬಿ ಮೆಣಸಿನ ಕಾಯಿ: ಕ್ವಿಂಟಲ್‌ಗೆ ₹ 26 ಸಾವಿರ

ಬ್ಯಾಡಗಿ ಮಾರುಕಟ್ಟೆ ಇತಿಹಾಸದಲ್ಲೇ ಗರಿಷ್ಠ ದರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 19:45 IST
Last Updated 30 ಡಿಸೆಂಬರ್ 2019, 19:45 IST
ಡಬ್ಬಿ ಮೆಣಸಿನಕಾಯಿ 
ಡಬ್ಬಿ ಮೆಣಸಿನಕಾಯಿ    

ಬ್ಯಾಡಗಿ (ಹಾವೇರಿ ಜಿಲ್ಲೆ): ‘ಡಬ್ಬಿ ಮೆಣಸಿನಕಾಯಿ, ಕ್ವಿಂಟಲ್‌ಗೆ ಗರಿಷ್ಠ ₹ 26,099ಕ್ಕೆ ಮಾರಾಟವಾಗಿದೆ. ಇದು ಮಾರುಕಟ್ಟೆ ಇತಿಹಾಸದಲ್ಲೇ ಅತಿ ಹೆಚ್ಚಿನ ದರವಾಗಿದೆ’ ಎಂದು ಎಪಿಎಂಸಿ ಹೇಳಿದೆ.

ಇಲ್ಲಿಯ ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 49,908 ಚೀಲ ಒಣ ಮೆಣಸಿನಕಾಯಿ ಆವಕವಾಗಿದೆ. ಇದರಲ್ಲಿ ಶೇ 20ರಷ್ಟು ಡಬ್ಬಿ ಮೆಣಸಿನಕಾಯಿ ಇದೆ. ಪ್ರಸಕ್ತ ಹಂಗಾಮು ಆರಂಭವಾದ ಬಳಿಕ ಆವಕದಲ್ಲಿ ಚೇತರಿಕೆ ಕಂಡಿದೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ ಕ್ವಿಂಟಲ್‌ಗೆ ಗರಿಷ್ಠ ದರ ₹15,599 ಇತ್ತು. ಮಳೆಯಿಂದ ಬೆಳೆ ಹಾಳಾಗಿದ್ದು, ದರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

‘ಬ್ಯಾಡಗಿ ತಳಿ ಹೋಲುವ ಸಿಂಜೆಂಟಾ ಸೀಡ್ ಮಾದರಿಯ ಮೆಣಸಿನಕಾಯಿ ಮಾತ್ರ ಹೆಚ್ಚಿಗೆ ಮಾರುಕಟ್ಟೆಗೆ ಬರುತ್ತಿದೆ. ಇದನ್ನು ಬಳ್ಳಾರಿ, ರಾಯಚೂರು, ಕಲಬುರ್ಗಿ, ಶಹಾಪುರ, ಸುರಪುರ ಹಾಗೂ ಆಂಧ್ರದ ಗಡಿ ಭಾಗದಲ್ಲಿ ಬೆಳೆಯಲಾಗುತ್ತದೆ’ ಎಂದು ವರ್ತಕರ ಸಂಘದ ಜಂಟಿ ಕಾರ್ಯದರ್ಶಿ ವಿ.ಎಸ್.ಮೋರಿಗೇರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.