ನವದೆಹಲಿ: ಅಕ್ಟೋಬರ್ ತಿಂಗಳಿನಿಂದ ಸ್ಪೆಷಾಲಿಟಿ ಫರ್ಟಿಲೈಜರ್ ರಫ್ತಿಗೆ ಚೀನಾ ಮತ್ತೆ ನಿರ್ಬಂಧ ಹೇರಲಿದೆ. ಇದು ಪೂರೈಕೆ ಸವಾಲು ಸೃಷ್ಟಿಸಲಿದ್ದು, ದರ ಹೆಚ್ಚಳಕ್ಕೆ ಕಾರಣವಾಗಲಿದೆ. ಅಲ್ಲದೆ, ನೇರವಾಗಿ ರೈತರ ಮೇಲೆ ಪರಿಣಾಮ ಬೀರಲಿದೆ ಎಂದು ಕೈಗಾರಿಕಾ ವಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಚೀನಾ ಅಕ್ಟೋಬರ್‌ನಿಂದ ನಿರ್ಬಂಧವನ್ನು ಜಾರಿಗೆ ತರುತ್ತಿದೆ. ನಿರ್ಬಂಧವು ಭಾರತಕ್ಕೆ ಮಾತ್ರವೇ ಅನ್ವಯ ಆಗುವುದಿಲ್ಲ, ಜಗತ್ತಿನ ಇತರ ಮಾರುಕಟ್ಟೆಗಳಿಗೂ ಅನ್ವಯಿಸಲಿದೆ’ ಎಂದು ಕರಗುವ ರಸಗೊಬ್ಬರ ಕೈಗಾರಿಕಾ ಸಂಘದ (ಸೊಲ್ಯುಬಲ್ ಫರ್ಟಿಲೈಜರ್ ಇಂಡಸ್ಟ್ರಿ ಅಸೋಸಿಯೇಷನ್ – ಎಸ್‌ಎಫ್‌ಐಎ) ಅಧ್ಯಕ್ಷ ರಾಜೀವ್ ಚಕ್ರವರ್ತಿ ಹೇಳಿದ್ದಾರೆ.
ಭಾರತವು ಚೀನಾದಿಂದ ಶೇ 80ರಷ್ಟು ಸ್ಪೆಷಾಲಿಟಿ ಫರ್ಟಿಲೈಜರ್ ಅನ್ನು ನೇರವಾಗಿ ಆಮದು ಮಾಡಿಕೊಳ್ಳುತ್ತಿದೆ. ಉಳಿದ ಶೇ 20ರಷ್ಟನ್ನು ಪರೋಕ್ಷವಾಗಿ ಚೀನಾದ ವ್ಯಾಪಾರ ಮೂಲಗಳಿಂದ ಖರೀದಿಸುತ್ತದೆ. ಭಾರತವು, ಚೀನಾದ ಸ್ಪೆಷಾಲಿಟಿ ಫರ್ಟಿಲೈಜರ್ ಆಮದು ಮೇಲೆ ಶೇ 95ರಷ್ಟು ಅವಲಂಬಿಸಿದೆ.
ಇತ್ತೀಚೆಗೆ ಚೀನಾ ಸ್ಪೆಷಾಲಿಟಿ ಫರ್ಟಿಲೈಜರ್ ರಫ್ತು ಮೇಲೆ ನಿರ್ಬಂಧ ಹೇರಿತ್ತು. ಇದರಿಂದ ಲಭ್ಯತೆಯಲ್ಲಿ ಕೊರತೆಯುಂಟಾಗಿ, ಬೆಲೆ ಶೇ 40ರಷ್ಟು ಏರಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.