ತೆಂಗಿನಕಾಯಿ
ತುಮಕೂರು: ಕ್ವಿಂಟಲ್ ಕೊಬ್ಬರಿ ಧಾರಣೆಯು ₹19 ಸಾವಿರ ದಾಟಿದ ಬೆನ್ನಲ್ಲೇ ಯುಗಾದಿ ಹಬ್ಬದ ಸಮಯದಲ್ಲಿ ತೆಂಗಿನಕಾಯಿ ಬೆಲೆ ಸಹ ದುಬಾರಿಯಾಗಿದೆ.
ಇಲ್ಲಿನ ಸಗಟು ಮಾರುಕಟ್ಟೆ ಯಲ್ಲಿ ದಪ್ಪ ಗಾತ್ರದ ಒಂದು ತೆಂಗಿನಕಾಯಿ ₹65ರಿಂದ ₹70ರವರೆಗೂ ಮಾರಾಟವಾಗಿದೆ. ಇದು ಈವರೆಗಿನ ದಾಖಲೆ ಬೆಲೆ ಎನ್ನಲಾಗಿದೆ. ಮಧ್ಯಮ ಗಾತ್ರದ ತೆಂಗಿನಕಾಯಿ ₹50ರಿಂದ ₹60, ಸಣ್ಣ ಗಾತ್ರದ ಕಾಯಿ ₹25ರಿಂದ ₹40ರ ವರೆಗೆ ಮಾರಾಟವಾಗಿದೆ.
ಬೇಸಿಗೆ ಸಮಯದಲ್ಲಿ ಇಳುವರಿ ಗಣನೀಯವಾಗಿ ಕಡಿಮೆ ಯಾಗಿರುವುದು, ಮಾರುಕಟ್ಟೆ ಯಲ್ಲಿ ಬೇಡಿಕೆಯಷ್ಟು ಆವಕ ಇಲ್ಲದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ವರ್ತಕರು.
ಬೇಸಿಗೆ ಸಮಯದಲ್ಲಿ ಎಳನೀರಿಗೂ ಉತ್ತಮ ಬೆಲೆ ಸಿಗುತ್ತಿದೆ. ವರ್ತಕರು ತೋಟಕ್ಕೆ ಬಂದು ಒಂದು ಎಳನೀರಿಗೆ ₹40ರಂತೆ ಸಗಟು ಬೆಲೆಯಲ್ಲಿ ಖರೀದಿಸುತ್ತಿದ್ದಾರೆ. ಎಳನೀರು ಬೆಲೆ ₹60 ದಾಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.