ADVERTISEMENT

ಕಾಯಿನ್‌ ಡಿಸಿಎಕ್ಸ್‌ನಿಂದ ಬ್ಲಾಕ್‌ಚೈನ್‌ ನವೋದ್ಯಮಗಳಲ್ಲಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 10:32 IST
Last Updated 12 ಮೇ 2022, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕ್ರಿಪ್ಟೊ ಕರೆನ್ಸಿಗಳಿಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಕಾಯಿನ್‌ಡಿಸಿಎಕ್ಸ್ ಕಂಪನಿಯು ಆರಂಭಿಕ ಹಂತದಲ್ಲಿರುವ ಕ್ರಿಪ್ಟೊ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ ನವೋದ್ಯಮಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದೆ. ಈ ಹೂಡಿಕೆಗಳಿಗಾಗಿ ಕಂಪನಿಯು ‘ಕಾಯಿನ್‌ಡಿಸಿಎಕ್ಸ್‌ ವೆಂಚರ್ಸ್‌’ ಹೆಸರಿನ ಅಂಗ ಸಂಸ್ಥೆಗೆ ಚಾಲನೆ ನೀಡಿದೆ.

ಬ್ಲಾಕ್‌ಚೈನ್ ಆಧಾರಿತ ಜಾಲತಾಣ ವ್ಯವಸ್ಥೆಯನ್ನು ದೇಶದಲ್ಲಿ ಇನ್ನಷ್ಟು ಗಟ್ಟಿಗೊಳಿಸಲು ಕಾಯಿನ್‌ಡಿಸಿಎಕ್ಸ್‌ ವೆಂಚರ್ಸ್ ನೆರವಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಕ್ರಿಪ್ಟೊ ಹಾಗೂ ಬ್ಲಾಕ್‌ಚೈನ್ ಲೋಕದ ವೆಂಚರ್ ಕ್ಯಾಪಿಟಲಿಸ್ಟ್‌ಗಳ ಜೊತೆ ನಾವು ಕೆಲಸ ಮಾಡಿದ್ದೇವೆ. ಹೀಗಾಗಿ, ಈ ವಲಯದ ನವೋದ್ಯಮಗಳಿಗೆ ಅಗತ್ಯವಿರುವ ಬೆಂಬಲ ಏನು ಎಂಬುದು ನಮಗೆ ತಿಳಿದಿದೆ’ ಎಂದು ಕಾಯಿನ್‌ ಡಿಸಿಎಕ್ಸ್ ಕಂಪನಿಯ ಸಂಸ್ಥಾ‍ಪಕ ಹಾಗೂ ಸಿಇಒ ಸುಮಿತ್ ಗುಪ್ತಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.