
ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ವಾಣಿಜ್ಯ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ದರ ಏರಿಕೆಯಾಗಿದೆ. 19 ಕೆ.ಜಿಯ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹111 ಏರಿಕೆ ಆಗಿದೆ. ಆದರೆ, ಗೃಹ ಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇದು ಹೋಟೆಲ್, ರೆಸ್ಟೋರೆಂಟ್, ಢಾಬಾ ಮತ್ತು ಕೇಟರಿಂಗ್ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.
ಬೆಲೆ ಏರಿಕೆ ಬಳಿಕ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿಯ ಸಿಲಿಂಡರ್ ದರ ₹1,580.50ನಿಂದ ₹1,691.50ಕ್ಕೆ ಏರಿಕೆಯಾಗಿದೆ.
ಕೋಲ್ಕತ್ತದಲ್ಲಿ ₹1,684 ನಿಂದ ₹1,795ಕ್ಕೆ, ಮುಂಬೈನಲ್ಲಿ ₹1,531.50ನಿಂದ ₹1,642.50ಕ್ಕೆ, ಚೆನ್ನೈನಲ್ಲಿ ₹1,739.50ನಿಂದ ₹1,849.50ಕ್ಕೆ ಹೆಚ್ಚಳವಾಗಿದೆ.
ಬೆಂಗಳೂರಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ₹1,787ಕ್ಕೆ ಏರಿಕೆಯಾಗಿದೆ
ಕಳೆದ ವರ್ಷ ಡಿಸೆಂಬರ್‌ನಲ್ಲಿ ₹10 ಮತ್ತು ನವೆಂಬರ್‌ನಲ್ಲಿ ₹5 ಬೆಲೆ ಕಡಿತ ಮಾಡಲಾಗಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಆಧರಿಸಿ ತೈಲ ಕಂಪನಿಗಳು ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಮಾಡುತ್ತವೆ. ರಾಜ್ಯದಿಂದ ರಾಜ್ಯಕ್ಕೆ ತೆರಿಗೆ ಮತ್ತು ಸಾಗಣೆ ವೆಚ್ಚ ಆಧರಿಸಿ ಬೆಲೆ ವ್ಯತ್ಯಾಸವಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.