ADVERTISEMENT

ತಗ್ಗಿದ ಮೂಲಸೌಕರ್ಯ ವಲಯದ ಬೆಳವಣಿಗೆ

ಪಿಟಿಐ
Published 29 ಏಪ್ರಿಲ್ 2022, 15:48 IST
Last Updated 29 ಏಪ್ರಿಲ್ 2022, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೂಲಸೌಕರ್ಯ ವಲಯದ ಪ್ರಮುಖ ಎಂಟು ಕೈಗಾರಿಕೆಗಳ ಬೆಳವಣಿಗೆಯು 2021ರ ಮಾರ್ಚ್‌ಗೆ ಹೋಲಿಸಿದರೆ 2022ರ ಮಾರ್ಚ್‌ನಲ್ಲಿ ಇಳಿಕೆ ಆಗಿದೆ.

2021ರಲ್ಲಿ ಇದು ಶೇ 12.6ರಷ್ಟು ಬೆಳವಣಿಗೆ ಕಂಡಿತ್ತು. 2022ರಲ್ಲಿ ಶೇ 4.3ಕ್ಕೆ ಇಳಿಕೆ ಆಗಿದೆ. 2022ರ ಫೆಬ್ರುವರಿಯಲ್ಲಿ ಶೇ 6ರಷ್ಟು ಬೆಳವಣಿಗೆ ಆಗಿತ್ತು.

ಕಲ್ಲಿದ್ದಲು ಮತ್ತು ಕಚ್ಚಾ ತೈಲ ಉತ್ಪಾದನೆ ಇಳಿಕೆ ಆಗಿರುವುದರಿಂದ ವಲಯದ ಬೆಳವಣಿಗೆ ಪ್ರಮಾಣ ತಗ್ಗಿದೆ.

ADVERTISEMENT

2021–22ರ ಏಪ್ರಿಲ್‌–ಮಾರ್ಚ್‌ ಅವಧಿಯಲ್ಲಿ ಎಂಟು ವಲಯಗಳು ಶೇ 10.4ರಷ್ಟು ಬೆಳವಣಿಗೆ ಕಂಡಿವೆ. 2020–21ರ ಇದೇ ಅವಧಿಯಲ್ಲಿ ಶೇ 6.4ರಷ್ಟು ಬೆಳವಣಿಗೆ ಕಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.