ADVERTISEMENT

ಜಾಗತಿಕ ತೈಲ ಬೇಡಿಕೆ ತಗ್ಗಿಸಿದ ಕೋವಿಡ್‌

ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಹೇಳಿಕೆ

ಏಜೆನ್ಸೀಸ್
Published 13 ಆಗಸ್ಟ್ 2020, 15:30 IST
Last Updated 13 ಆಗಸ್ಟ್ 2020, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ಯಾರಿಸ್‌: ಕೊರೊನಾ ವೈರಾಣು‌ ತೀವ್ರವಾಗಿ ಹರಡುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ತೈಲದ ಬೇಡಿಕೆ ಇಳಿಕೆಯಾಗುತ್ತಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ.

ವೈರಾಣು‌ ಹರಡುವಿಕೆ ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ವಿಮಾನಯಾನ ಮತ್ತು ಸಾರಿಗೆ ವಲಯಗಳ ಕಾರ್ಯಾಚರಣೆಗೆ ಭಾರಿ ಪೆಟ್ಟು ಬಿದ್ದಿದೆ. ಇದರಿಂದಾಗಿ ತೈಲ ಬೇಡಿಕೆ ಪ್ರಮಾಣದಲ್ಲಿ ಹೆಚ್ಚಿನ ಇಳಿಕೆ ಕಾಣುವಂತಾಗಿದೆ ಎಂದು ತಿಳಿಸಿದೆ.

ತೈಲ ಬೇಡಿಕೆಯ ಮೇಲೆ ಕೋವಿಡ್‌–19 ಕಾಯಿಲೆಯ ಪರಿಣಾಮವು ದೀರ್ಘಾವಧಿಯದ್ದಾಗಿರಲಿದೆ. 2020ರಲ್ಲಿ ತೈಲ ಬೇಡಿಕೆಯು ಪ್ರತಿ ದಿನಕ್ಕೆ 81 ಲಕ್ಷ ಟನ್‌ಗಳಷ್ಟು ಇಳಿಕೆಯಾಗುವ ಅಂದಾಜು ಮಾಡಲಾಗಿದೆ ಎಂದು ತನ್ನ ತಿಂಗಳ ವರದಿಯಲ್ಲಿ ಹೇಳಿದೆ.

ADVERTISEMENT

2020ರಲ್ಲಿ ಒಟ್ಟಾರೆಯಾಗಿ ಜಾಗತಿಕ ತೈಲ ಬೇಡಿಕೆಯು ಪ್ರತಿ ದಿನಕ್ಕೆ 9.19 ಕೋಟಿ ಟನ್‌ಗಳಷ್ಟು ಇರಲಿದೆ ಎಂದು ಹೇಳಿದೆ. 2021ರಲ್ಲಿ 9.71 ಕೋಟಿ ಟನ್‌ಗಳಿಗೆ ಏರಿಕೆ ಕಾಣಲಿದೆಯಾದರೂ ತನ್ನ ಈ ಹಿಂದಿನ ಅಂದಾಜಿಗಿಂತಲೂ ಕಡಿಮೆಯೇ ಇರಲಿದೆ ಎಂದು ತಿಳಿಸಿದೆ.

ವಿಮಾನಯಾನ ವಲಯದ ಚೇತರಿಕೆಗೆ ಹೆಚ್ಚಿನ ಸಮಯ ಹಿಡಿಯಲಿದೆ. ಹೀಗಾಗಿ 2019ರ ಡಿಸೆಂಬರ್‌ ಅಂತ್ಯದವರೆಗಿನ ತೈಲ ಬಳಕೆಗೆ ಹೋಲಿಸಿದರೆ, 2021ರ ಡಿಸೆಂಬರ್‌ ಅಂತ್ಯದವರೆಗೆ ಬಳಕೆ ಆಗಲಿರುವ ತೈಲದ ಪ್ರಮಾಣ ಶೇಕಡ 2ರಷ್ಟು ಕಡಿಮೆ ಇರಲಿದೆ ಎಂದು ಹೇಳಿದೆ.

ಇಳಿಕೆ ಪ್ರಮಾಣ

ಮೇ;79%

ಜೂನ್‌;75%

ಬೇಡಿಕೆ ನಿರೀಕ್ಷೆ (ಪ್ರತಿ ದಿನಕ್ಕೆ)

9.19 ಕೋಟಿ ಟನ್‌

2020ಕ್ಕೆ

9.71 ಕೋಟಿ ಟನ್‌

2021ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.