ADVERTISEMENT

ಕುಕ್ಕುಟೋದ್ಯಮಕ್ಕೆ ₹22,500 ಕೋಟಿ ನಷ್ಟ: ಎಐಪಿಬಿಎ

ಪಿಟಿಐ
Published 4 ಏಪ್ರಿಲ್ 2020, 22:24 IST
Last Updated 4 ಏಪ್ರಿಲ್ 2020, 22:24 IST
   

ಹೈದರಾಬಾದ್‌: ಕೊರನಾದಿಂದಾಗಿ ದೇಶದ ಕುಕ್ಕುಟೋದ್ಯಮವು ಫೆಬ್ರುವರಿಯಿಂದ ಮಾರ್ಚ್‌ವರೆಗೆ ಒಟ್ಟಾರೆ ₹22,500 ಕೋಟಿ ಮೊತ್ತದ ನಷ್ಟ ಅನುಭವಿಸಿದೆ.

ಮೊಟ್ಟೆ ಮತ್ತು ಕೋಳಿ ಮಾಂಸ ತಿನ್ನುವುದರಿಂದ ಕೊರೊನಾ ಸೋಂಕು ಹರಡಲಿದೆ ಎನ್ನುವ ವದಂತಿಗಳಿಂದಾಗಿ ಉದ್ಯಮದ ವಹಿವಾಟಿನ ಮೇಲೆ ಪೆಟ್ಟು ಬಿದ್ದಿದೆ.ಈ ಭಾರಿ ಮೊತ್ತದ ನಷ್ಟದಿಂದ ಉದ್ಯಮವು ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಪರಿಹಾರ ಕೊಡುಗೆ ಘೋಷಿಸಬೇಕು ಎಂದು ಅಖಿಲ ಭಾರತ ಕೋಳಿ ತಳಿ ಸಂವರ್ಧಕರ ಸಂಘ (ಎಐಪಿಬಿಎ) ಕೇಂದ್ರಕ್ಕೆ ಮನವಿ ಮಾಡಿದೆ.

‘ಮೊಟ್ಟೆ ಮತ್ತು ಕೋಳಿ ಮಾಂಸ ತಿನ್ನುವುದರಿಂದ ಸೋಂಕು ಬರುವುದಿಲ್ಲ ಎನ್ನುವ ಸ್ಪಷ್ಟನೆಯನ್ನೂ ನೀಡಿದ ಬಳಿಕ ವಹಿವಾಟು ತುಸು ಚೇತರಿಕೆ ಕಂಡಿದೆಯಾದರೂ ಎರಡೂವರೆ ತಿಂಗಳಿನಲ್ಲಿ ಭಾರಿ ನಷ್ಟ ಆಗಿದೆ’ ಎಂದು ಸಂಘದ ಉಪಾಧ್ಯಕ್ಷ ಸುರೇಶ್‌ ಸಿ. ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.