ADVERTISEMENT

ಎಂಎಸ್‌ಎಂಇ ಬಾಕಿ: ₹ 13,400 ಕೋಟಿ ಪಾವತಿಸಿದ ಕೇಂದ್ರೋದ್ಯಮಗಳು

ಪಿಟಿಐ
Published 19 ಅಕ್ಟೋಬರ್ 2020, 12:34 IST
Last Updated 19 ಅಕ್ಟೋಬರ್ 2020, 12:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳು (ಸಿಪಿಎಸ್‌) ಐದು ತಿಂಗಳಿನಲ್ಲಿ ₹ 13,400 ಕೋಟಿ ಬಾಕಿ ಮೊತ್ತವನ್ನುಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಪಾವತಿಸಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಎಂಎಸ್‌ಎಂಇ ಸಚಿವಾಲಯವು 2,800ಕ್ಕೂ ಅಧಿಕ ಕಂಪನಿಗಳ ಆಡಳಿತ ಮಂಡಳಿಗಳಿಗೆ ಬಾಕಿ ಮೊತ್ತ ಪಾವತಿಸುವಂತೆ ಈಗ ಪತ್ರ ಬರೆದಿದೆ.

ಬಾಕಿ ಮೊತ್ತ ಪಾವತಿಸುವುದರಿಂದ ವಲಯದ ಕಾರ್ಯಾಚರಣೆ ಮತ್ತು ಆ ಉದ್ದಿಮೆಗಳ ಕೆಲಸಗಾರರ ಜೀವನ ನಿರ್ವಹಣೆಗೆ ಅನುಕೂಲ ಆಗಲಿದೆ. ಕೆಲವು ಉದ್ದಿಮೆಗಳಿಗೆ ಹಬ್ಬದ ಸಂದರ್ಭದಲ್ಲಿನ ವಹಿವಾಟು ಬಹಳ ಮುಖ್ಯ. ಏಕೆಂದರೆ ಈ ಅವಧಿಯಲ್ಲಿ ನಡೆಯುವ ವಹಿವಾಟು ಆಧರಿಸಿ ಅವು ವರ್ಷವಿಡೀ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಎಂಎಸ್‌ಎಂಇಗಳಿಗೆ ನೀಡಬೇಕಿರುವ ಬಾಕಿಯನ್ನು ಆದ್ಯತೆಯ ಮೇರೆಗೆ ಪಾವತಿಸುವಂತೆ ಎಂಎಸ್‌ಎಂಇ ಸಚಿವಾಲಯವು ಕಾರ್ಪೊರೇಟ್ ಕಂಪನಿಗಳಿಗೆ ಕಳೆದ ತಿಂಗಳು ಕೂಡ ಸೂಚನೆ ನೀಡಿತ್ತು. ಈ ಸಂಬಂಧ ದೇಶದ ಮುಂಚೂಣಿ 500 ಕಂಪನಿಗಳ ಮಾಲೀಕರು ಅಥವಾ ಕಂಪನಿಗಳ ಉನ್ನತಾಧಿಕಾರಿಗಳಿಗೆ ಸಚಿವಾಲಯವು ಇ–ಮೇಲ್‌ ಕಳುಹಿಸಿರುವುದಾಗಿಯೂ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.