ADVERTISEMENT

ಎರಡನೇ ಅಲೆ: ಕ್ರೆಡಾಯ್ ಆತಂಕ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 13:14 IST
Last Updated 7 ಏಪ್ರಿಲ್ 2021, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯ ಬಗ್ಗೆ ಆತಂಕ ಇದೆ. ಇದು ಉಂಟುಮಾಡಲಿರುವ ಪರಿಣಾಮಗಳ ಬಗ್ಗೆ ಅರಿಯಲು ಸಮಯ ಬೇಕಾಗಲಿದೆ’ ಎಂದು ಭಾರತೀಯ ರಿಯಲ್ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ಹೇಳಿದರು.

ದೇಶದ ಪ್ರಮುಖ ಎಂಟು ನಗರಗಳಲ್ಲಿ 2020ರಲ್ಲಿ ವಸತಿ ಮಾರಾಟವು ಶೇಕಡ 40ರಿಂದ ಶೇ 50ರಷ್ಟು ಇಳಿಕೆ ಕಂಡಿದೆ. ಆದರೆ, 2021ರ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ವಸತಿ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಅವರು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಂದಿನ ಒಂಭತ್ತು ತಿಂಗಳಿನಲ್ಲಿಯೂ ಈ ಬೆಳವಣಿಗೆಯು ಮುಂದುವರಿಯುವ ಭರವಸೆ ಇದೆ. ಕಳೆದ ವರ್ಷದ ಏಪ್ರಿಲ್‌–ಮೇ ಅವಧಿಯ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳ ಮೇಲೆ ಮತ್ತೆ ನಿರ್ಬಂಧ ಹೇರದೇ ಇದ್ದರೆ ರಿಯಲ್‌ ಎಸ್ಟೇಟ್‌ ವಲಯದ ಬೆಳವಣಿಗೆಯು 2019ರಲ್ಲಿ ಕಂಡಿದ್ದ ಮಟ್ಟಕ್ಕೆ ಮರಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ADVERTISEMENT

ಮುದ್ರಾಂಕ ಶುಲ್ಕ ತಗ್ಗಿಸಿ: ರಿಯಲ್‌ ಎಸ್ಟೇಟ್‌ ವಲಯಕ್ಕೆ ಉತ್ತೇಜನ ನೀಡಲು ಆಸ್ತಿಗಳ ನೋಂದಣಿ ಮೇಲಿನ ಮುದ್ರಾಂಕ ಶುಲ್ಕ ತಗ್ಗಿಸುವಂತೆ ಅವರು ರಾಜ್ಯ ಸರ್ಕಾರಗಳಿಗೆ ಮತ್ತೊಮ್ಮೆ ಮನವಿ ಮಾಡಿದರು.

ವಸತಿ ಮತ್ತು ವಾಣಿಜ್ಯ ಯೋಜನೆಗಳೆರಡಕ್ಕೂ ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಸೌಲಭ್ಯ, ತ್ವರಿತವಾಗಿ ಪರಿಸರ ಪರವಾನಗಿ ಸಿಗವಂತೆ ಹಾಗೂ ಸುಲಭವಾಗಿ ಸಾಲ ಸಿಗುವಂತೆ ಮಾಡಬೇಕು ಎನ್ನುವ ಉದ್ಯಮ ವಲಯದ ಬೇಡಿಕೆಗಳನ್ನು ಈಡೇರಿಸುವಂತೆಯೂ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.