ADVERTISEMENT

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಡಿ–ಮಾರ್ಟ್‌ ವರಮಾನ ಹೆಚ್ಚಳ

ಪಿಟಿಐ
Published 4 ಅಕ್ಟೋಬರ್ 2025, 13:06 IST
Last Updated 4 ಅಕ್ಟೋಬರ್ 2025, 13:06 IST
ಡಿ–ಮಾರ್ಟ್‌
ಡಿ–ಮಾರ್ಟ್‌   

ನವದೆಹಲಿ: ಡಿ–ಮಾರ್ಟ್‌ ಮಳಿಗೆಗಳ ಒಡೆತನ ಹೊಂದಿರುವ ಅವೆನ್ಯು ಸೂಪರ್‌ಮಾರ್ಟ್ಸ್‌ ಕಂಪನಿಯ ವರಮಾನವು ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 15.4ರಷ್ಟು ಏರಿಕೆಯಾಗಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವರಮಾನವು ₹14,050 ಕೋಟಿಯಷ್ಟಿತ್ತು. ಈ ಬಾರಿ ₹16,219 ಕೋಟಿಯಷ್ಟಾಗಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಂಪನಿಯು ಒಟ್ಟು 432 ಮಳಿಗೆಗಳನ್ನು ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT