ADVERTISEMENT

ಭಾರೀ ಮಳೆಗೆ ಬೆಳೆ ಹಾನಿ | ದೆಹಲಿಯಲ್ಲಿ ಕೆ.ಜಿಗೆ ₹80 ತಲುಪಿದ ಟೊಮೆಟೊ ಬೆಲೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 5:46 IST
Last Updated 21 ಜುಲೈ 2019, 5:46 IST
   

ನವದೆಹಲಿ:ನಿತ್ಯ ಬಳಕೆಯ ತರಕಾರಿಗಳಲ್ಲೊಂದಾದ ಟೊಮೆಟೊ ಬೆಲೆ ಗಗನಮುಖಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಪ್ರತಿ ಕೆ.ಜಿಗೆ ₹60ರಿಂದ 80ರ ಗಡಿ ತಲುಪಿದೆ.

ಉತ್ತರ ಭಾರತದಲ್ಲಿ ನಿರಂತರವಾಗಿ ಬೀಳುತ್ತಿರುವ ಭಾರೀ ಮಳೆಯಿಂದಾಗಿ ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಳೆ ಹಾಳಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.

‘ಪ್ರಸ್ತುತ ಟೊಮೆಟೊ ಬೆಲೆ ಕೆ.ಜಿಗೆ ₹60ರಿಂದ 80ರಕ್ಕೆ ಏರಿಕೆಯಾಗಿದೆ. ಈ ಮೊದಲು ಕೆ.ಜಿಗೆ ₹30 ಇತ್ತು. ಭಾರೀ ಮಳೆಯ ಪರಿಣಾಮದಿಂದಾಗಿ ಬೆಳೆಗಳು ಹಾಳಾಗಿವೆ. ಆ ಕಾರಣಕ್ಕೆ ಬೆಲೆ ಹೆಚ್ಚಿದೆ. ಮಳೆಗಾಲದ ನಂತರವೇ ಬೆಲೆಗಳು ಇಳಿಯುವ ನಿರೀಕ್ಷೆ ಇದೆ’ ಎಂದು ಇಲ್ಲಿನ ಪಹಾರ್‌ಗಂಜ್‌ನ ವ್ಯಾಪಾರಿ ಶ್ಯಾಮ್‌ ಸುಂದರ್‌ ತಿಳಿಸಿದರು ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ADVERTISEMENT

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಭಾರೀ ಮಳೆಗೆ ಪ್ರವಾಹದಿಂದಾಗಿ ಜನ ಜೀವನ ಅಸ್ಥವ್ಯಸ್ತವಾಗಿದೆ. ಉತ್ತರದ ರಾಜ್ಯಗಳಾದ ಹರಿಯಾಣ, ಉತ್ತರಾಖಂಡ ಹಾಗೂ ಬಿಹಾರ, ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.