ADVERTISEMENT

ಡಿಬಿಟಿ ಅಡಿ ಇದುವರೆಗೆ ₹34 ಲಕ್ಷ ಕೋಟಿ ಹಣ ಫಲಾನುಭವಿಗಳಿಗೆ: ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಪಿಟಿಐ
Published 1 ಮಾರ್ಚ್ 2024, 11:17 IST
Last Updated 1 ಮಾರ್ಚ್ 2024, 11:17 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ನವದೆಹಲಿ: ನೇರ ನಗದು ವರ್ಗಾವಣೆ (ಡಿಬಿಟಿ) ವಿಧಾನದ ಅಡಿ, ಕೇಂದ್ರ ಹಾಗೂ ರಾಜ್ಯದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇಲ್ಲಿವರೆಗೆ ₹ 34 ಲಕ್ಷ ಕೋಟಿ ಹಣ ಪಾವತಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಂಟ್ರೋಲರ್ ಜನರಲ್ ಅಕೌಂಟ್ಸ್‌ (ಸಿಜಿಎ) ಆಯೋಜಿಸಿದ್ದ ‘48 ನೇ ಸಿವಿಲ್ ಅಕೌಂಟ್ಸ್ ಡೇ’ ಕಾರ್ಯಕ್ರಮಕ್ಕೆ ಅವರು ಶುಭಹಾರೈಸಿ ಕಳುಹಿಸಿದ ಪತ್ರದಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

ADVERTISEMENT

PFMS ಅಡಿ ಡಿಬಿಟಿ ನಡೆಯುತ್ತಿದ್ದು ಇದರಿಂದ ಕರಾರುವಕ್ಕಾದ ಪಾವತಿಗಳು ಮತ್ತು ಲೆಕ್ಕಪತ್ರಗಳ ನಿರ್ವಹಣೆ ಸಾಧ್ಯವಾಗಿದೆ ಎಂದು ಅವರು ಪ್ರಶಂಸಿದ್ದಾರೆ.

ಡಿಬಿಟಿ ಅಡಿ ಇದುವರೆಗೆ ₹ 34 ಲಕ್ಷ ಕೋಟಿ ಹಣ ಅತ್ಯಂತ ಪಾರದರ್ಶಕವಾಗಿ ಪಾವತಿಯಾಗಿರುವುದು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಒಂದು ಹೊಸ ಮೈಲಿಗಲ್ಲು. ಇಷ್ಟೊಂದು ಹಣ ಎಲ್ಲಿಯೂ ಸೋರಿಕೆಯಾಗದೇ ನೇರವಾಗಿ ಫಲಾನುಭವಿಗಳಿಗೆ ಹೋಗಿದೆ ಎಂದು ಹೇಳಿದ್ದಾರೆ.

ಡಿಬಿಟಿಯೂ ಜನಕೇಂದ್ರಿತ ಆಡಳಿತವನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲೂ ಸಿಜಿಎ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೇಂದ್ರದ ಸಿಜಿಎ ನೇತೃತ್ವದಲ್ಲಿ Financial Management System (PFMS) ಡಿಬಿಟಿಯನ್ನು ಕಾರ್ಯಗತಗೊಳಿಸುತ್ತದೆ.

ಸಾವಿರಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಡಿಬಿಟಿ ಪಾವತಿ ಅಡಿ ಬರುತ್ತವೆ.

ಸಮಾರಂಭದಲ್ಲಿ ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿ ಟಿ.ವಿ ಸೋಮನಾಥನ್ ಅವರು ನಿರ್ಮಲಾ ಸೀತಾರಾಮನ್ ಅವರ ಭಾಷಣ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.