ನವದೆಹಲಿ: ಭಾರತದಲ್ಲಿ ಕೃಷಿ, ಲಾಜಿಸ್ಟಿಕ್ಸ್, ರಕ್ಷಣೆ ಸೇರಿ ಇನ್ನೂ ಮುಂತಾದ ಕ್ಷೇತ್ರಗಳಿಂದ ಡ್ರೋನ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚುತ್ತಿದ್ದು 2030 ರ ವೇಳೆಗೆ ಈ ಉದ್ಯಮದ ಗಾತ್ರ ಸುಮಾರು ₹2 ಲಕ್ಷ ಕೋಟಿಗೆ ತಲುಪಲಿದೆ.
ನೆಕ್ಷ್‌ಜೆನ್ ಎಂಬ ಅಧ್ಯಯನ ವರದಿ ಈ ಮಾಹಿತಿಯನ್ನು ನೀಡಿದೆ.
ಇತ್ತೀಚೆಗೆ ಭಾರತದಲ್ಲಿ ಡ್ರೋನ್‌ಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ರಕ್ಷಣೆ ಹೊರತುಪಡಿಸಿದರೆ ಕೃಷಿ ಕ್ಷೇತ್ರದಿಂದ ಹೆಚ್ಚು ಬೇಡಿಕೆ ಇದೆ ಎಂದು ವರದಿ ಹೇಳಿದೆ.
15 ನಗರಗಳಲ್ಲಿನ 150 ಡ್ರೋನ್ ಕಂಪನಿಗಳನ್ನು ಸಂದರ್ಶಶಿಸಿ ವರದಿ ತಯಾರಿಸಲಾಗಿದ್ದು, 2030ರ ವೇಳೆಗೆ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳಿಗೆ ಶೇ 40 ರಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದು ನೆಕ್ಷ್‌ಜೆನ್ ಹೇಳಿದೆ.
ಜಾಗತಿಕವಾಗಿಯೂ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಈ ಒಂದು ಕ್ಷೇತ್ರದಲ್ಲಿಯೇ ಸುಮಾರು ₹51,000 ಕೋಟಿ ವಹಿವಾಟು 2030ರ ವೇಳೆಗೆ ನಡೆಯಲಿದೆ ಎಂದು ತಿಳಿಸಿದೆ.
ಇದೇ ಜುಲೈ 31, ಆಗಸ್ಟ್ 1 ರಂದು ದೆಹಲಿಯಲ್ಲಿ Drone International Expo 2025 ನಡೆಯಲಿದೆ. ಇದಕ್ಕಾಗಿ ಭಾರತದ ಕಂಪನಿಗಳು ಬಹುದೊಡ್ಡ ತಯಾರಿ ಮಾಡಿಕೊಳ್ಳುತ್ತಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.